Product Description
ಸಮೃದ್ಧವಾದ ಅನುಭವಸಾಮಗ್ರಿ, ಸಹಾನುಭೂತಿಯಿದ್ದರೂ ಸಂಯಮವುಳ್ಳ ಸಂವೇದನೆ, ಆವರಣನಿರ್ಮಾಣಕ್ಕೆ ಅವಶ್ಯಕವಾದ ಎಲ್ಲ ವಿವರಗಳಲ್ಲಿ ಅರಿವು ಮತ್ತು ಅಧ್ಯಯನ, ಯಾವುದೇ ಸುಲಭೀಕರಣ-ಸರಳೀಕರಣಗಳ ಸಮಯಸಾಧಕತೆಯಿಲ್ಲದೆ ರಸ-ಭಾವಗಳಿಗಷ್ಟೇ ಬದ್ಧವಾಗಿರುವ ತಾತ್ತ್ವಿಕತೆ ಹಾಗೂ ಕಾವ್ಯಾತ್ಮಕವಾದ ಬನಿಯುಳ್ಳ ಭಾಷೆ ನ್ಯಾಸದ ಹೆಗ್ಗಳಿಕೆಗಳೆನ್ನಬೇಕು. ಘಟನೆಗಳು, ಪಾತ್ರಗಳು ಮತ್ತವೆರಡನ್ನೂ ಬೆಸೆಯುವ ಬುದ್ಧಿ-ಭಾವಗಳು ಹರೀಶರನ್ನು ಅವರ ಮೊದಲ ಕಾದಂಬರಿಯಲ್ಲಿಯೇ ಪ್ರಬುದ್ಧತೆಯತ್ತ ಕೊಂಡೊಯ್ಯುತ್ತವೆ. ಸರ್ವಾಥಗಳಲ್ಲಿಯೂ ಭರವಸೆಯುಳ್ಳ ಲೇಖಕರೊಬ್ಬರು ನ್ಯಾಸದ ಮೂಲಕ ಕನ್ನಡಕ್ಕೆ ಕಾಲಿರಿಸಿರುವುದು ತುಂಬ ಸಂತೋಷದ ಸಂಗತಿ.