Quantity
Product Description
ರಾಸಾಯನಿಕ ವಸ್ತು ಎಂದ ಕೂಡಲೇ ಮೂಗು ಮುಚ್ಚಿಕೊಳ್ಳುವವರೇ ಹೆಚ್ಚು. ಏಕೆಂದರೆ ಅದು ದುರ್ವಾಸನೆಯಿಂದ ಕೂಡಿರುತ್ತದೆಯಲ್ಲದೇ ಆರೋಗ್ಯಕ್ಕೆ ಹಾನಿಕರವೂ ಆಗಿರುತ್ತದೆ ಎಂಬ ಅಭಿಪ್ರಾಯವು ಜನರಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಸುಗಂಧ ದ್ರವ್ಯಗಳಲ್ಲೂ ಪದಾರ್ಥಗಳಲ್ಲೂ ಮತ್ತು ನಮ್ಮ ಸುತ್ತಮುತ್ತ ಇರುವ ಎಲ್ಲಾ ಪದಾರ್ಥಗಳಲ್ಲೂ ಮತ್ತು ಜೀವಜಂತುಗಳಲ್ಲೂ ರಾಸಾಯನಿಕ ವಸ್ತುಗಳಿರುತ್ತವೆ ಎಂದರೆ ಜನರು ಸಾಮಾನ್ಯವಾಗಿ ನಂಬುವುದು ಸುಲಭವಲ್ಲ. ಒಮ್ಮೆ ನಾವು ಹ್ಯಾಂಡ್ ಸ್ಯಾನಿಟೈಸರ್ ಕೊಳ್ಳುತ್ತಿದ್ದಾಗ ನಮ್ಮ ಪಕ್ಕದಲ್ಲಿದ್ದ ಒಬ್ಬರು ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಡಿ, ಏಕೆಂದರೆ ಅದರಲ್ಲಿ ರಾಸಾಯನಿಕಗಳಿವೆ ಎಂದು ಹೇಳಿದರು. ಅವರು ಸ್ಯಾನಿಟೈಸರ್ನಲ್ಲಿರುವ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ನಮಗೆ ತಿಳಿಸಲು ಪ್ರಯತ್ನಿಸುತ್ತಿದ್ದರು. ಬ್ರಿಟನ್ನಲ್ಲಿ 2010ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, 52%ರಷ್ಟು ಮಹಿಳೆಯರು ಮತ್ತು 37%ರಷ್ಟು ಪುರುಷರು ರಾಸಾಯನಿಕ ಮುಕ್ತ ವೈಯಕ್ತಿಕ ಉತ್ಪನ್ನಗಳು (ಮೈ ಸಾಬೂನು, ಕೂದಲ ಎಣ್ಣೆ, ಮುಖ ಶೃಂಗಾರ ಸಾಮಗ್ರಿಗಳು, ಸುಗಂಧ ದ್ರವ್ಯಗಳು, ಇತ್ಯಾದಿ) ಬೇಕು ಎಂದು ಕೇಳುತ್ತಾರೆ ಎಂದು ತಿಳಿದುಬಂದಿದೆ. ಈ ಸಾಮಗ್ರಿಗಳು 100% ರಾಸಾಯನಿಕಗಳು ಎಂಬುದನ್ನು ಗಮನಿಸಿದರೆ, ಈ ಹೇಳಿಕೆ ಎಂತಹ ಹಾಸ್ಯಾಸ್ಪದವಾಗಿದೆ' ಎಂದು ಕಾಣುತ್ತದೆ. ಬ್ರಿಟನ್ನಿನ 'ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ'ಯ ವಿಜ್ಞಾನಿಗಳು 2010ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಯಾವುದೇ ರಾಸಾಯನಿಕವನ್ನು ಹೊಂದಿರದ ವಸ್ತುವನ್ನು ತೋರಿಸಿಕೊಟ್ಟವರಿಗೆ ಒಂದು ಮಿಲಿಯನ್ (ಹತ್ತು ಲಕ್ಷ) ಬ್ರಿಟಿಷ್ ಪೌಂಡ್ಗಳ ಬಹುಮಾನವನ್ನು ಕೊಡುವುದಾಗಿ ಘೋಷಿಸಿತು. ಆದರೆ ಇದುವರೆಗೆ ಯಾರೂ ಅದನ್ನು ಗೆದ್ದಿಲ್ಲ ಎಂಬುದು ತಿಳಿದುಬಂದಿದೆ. ಕೆಲವು ವಿದ್ಯಾವಂತರೂ ಸೇರಿದಂತೆ ಹೆಚ್ಚಿನ ಜನರು ನಮ್ಮ ಮನೆಗಳಲ್ಲಿ ಬಳಸುವ ಆಹಾರ ಪದಾರ್ಥಗಳೂ ಸೇರಿದಂತೆ ಎಲ್ಲಾ ವಸ್ತುಗಳು ಕೂಡ ರಾಸಾಯನಿಕ ಗಳಿಂದಲೇ ಮಾಡಲ್ಪಟ್ಟಿರುತ್ತವೆ ಎಂಬ ಅಂಶದ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ ಅಥವಾ ಗೊಂದಲದಲ್ಲಿರುತ್ತಾರೆ. ಸಾಮಾನ್ಯವಾಗಿ ಎಲ್ಲಾ ರಾಸಾಯನಿಕಗಳು ಹಾನಿಕಾರಕ ಅಥವಾ ವಿಷಕಾರಿಗಳು ಎಂಬ ತಪ್ಪು ತಿಳುವಳಿಕೆಯನ್ನು ತೊಡೆದು ಹಾಕಲು ಈ ಪುಸ್ತಕದಲ್ಲಿ ಪ್ರಯತ್ನಿಸಲಾಗಿದೆ ರಾಸಾಯನಿಕ ವಸ್ತುಗಳ ಉಪಯುಕ್ತ ಅಂಶಗಳ ಬಗ್ಗೆ ಮಾಹಿತಿಯನ್ನು ಈ ಪುಸ್ತಕದಲ್ಲಿ ಕಾಣಬಹುದು.
Author
Gopalapur Nagendrappa and Renukarani Nagendrappa
Binding
Soft Bound
Number of Pages
336
Publication Year
2025
Publisher
Nava Karnataka Publications Pvt Ltd
Height
3 CMS
Length
22 CMS
Weight
500 GMS
Width
14 CMS
Language
Kannada