Select Size
Quantity
Product Description
ತೆಲುಗು ಕಥೆಗಳ ಪಿತಾಮಹನೆಂದು ಕರೆಸಿಕೊಳ್ಳುವ ಗುರಜಾಡರು ಸ್ತ್ರೀಪರ ಧ್ವನಿಯಾಗಿದ್ದವರು. ಮಾಸ್ತಿಯವರು ಕನ್ನಡದಲ್ಲಿ ಸಣ್ಣ ಕಥೆಗಳ ಜನಕರೆಂದು ಜನಮನದಲ್ಲಿ ಹೊಂದಿದ್ದ ಖ್ಯಾತಿಯೇ ತೆಲುಗಿನ ಕಥಾಸಾಹಿತ್ಯದಲ್ಲಿ ಗುರಜಾಡರಿಗೂ ಸಲ್ಲುತ್ತದೆ. ಅವರು ಮಾಸ್ತಿಯವರ ಸಮಕಾಲೀನರಷ್ಟೇ ಅಲ್ಲದೆ ಕನ್ನಡದಲ್ಲಿ ಮಾಸ್ತಿಯವರ ಮೊದಲ ಸಣ್ಣಕಥೆ ಪ್ರಕಟವಾದ ವರ್ಷವೇ ತೆಲುಗಿನಲ್ಲಿ ಗುರಜಾಡರ ಮೊದಲ ಕಥೆಯೂ ಪ್ರಕಟ ವಾಗಿದ್ದೊಂದು ವಿಶೇಷವೇ. ಉತ್ತಮ ಆದರ್ಶ, ಅಪ್ಪಟ ದೇಸೀಯ ಚಿಂತನೆ ಮೈಗೂಡಿಸಿಕೊಂಡ ಗುರಜಾಡರು ಬರೆದ ಕಥೆಗಳು ಸಂಖ್ಯೆಯಲ್ಲಿ ಕಡಿಮೆಯಾದರೂ ಮೌಲ್ಯವಂತಿಕೆಯಲ್ಲಿ ಎತ್ತರದ ಸ್ಥಾನ ಗಳಿಸಿವೆ.
ಸ್ತ್ರೀ ಶಿಕ್ಷಣದ ಅವಶ್ಯಕತೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಒತ್ತುಕೊಟ್ಟು ಬರೆದ ಅವರ ಕಥೆಗಳು ಅಂದಿನ ಕಾಲಕ್ಕಷ್ಟೇ ಅಲ್ಲದೆ ಇಂದಿಗೂ ಪ್ರಸ್ತುತವಾದ ವಿಚಾರಗಳೇ. ಇಲ್ಲಿ ಗುರುಜಾಡರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
Author
S Raghunatha
Binding
Soft Bound
ISBN-13
9789386504999
Number of Pages
190
Publication Year
2017
Publisher
Kuvempu Bhashaa Bharathi Pradhikaara
Height
2 CMS
Length
22 CMS
Weight
200 GMS
Width
14 CMS
Language
Kannada