Product Description
"ಆಡಳಿತವೆಲ್ಲಾ ಕನ್ನಡದಲ್ಲೇ ಎಲ್ಲಾ" - ಎಲ್ಲಾ ಕಛೇರಿಗಳಲ್ಲೂ ಕಾಣಬರುವ ಫಲಕ. ಸರಕಾರದ ಘೋಷಣೆಯೂ ಇದೆ. ನಮ್ಮ ಆಶಯವೂ ಹೌದು. ಆದರೆ ದೊರಕುವ ಪದಕೋಶಗಳೆಷ್ಟು ? ಇಂಗ್ಲಿಷ್ - ಕನ್ನಡ ಪದಕೋಶಗಳು ಹಲವಿದ್ದರೂ ಕನ್ನಡ - ಇಂಗ್ಲಿಷ್ ಪದಕೋಶ ಇದೇ ಮೊದಲನೆಯದು. ಆಡಳಿತದಲ್ಲಿ ಕನ್ನಡದ ಬಳಕೆಗೆ ನವಕರ್ನಾಟಕದ ಹೆಮ್ಮೆಯ ಕೊಡುಗೆ. ಈ ಪದಕೋಶದಲ್ಲಿ ಸುಮಾರು 12,900 ಮೂಲ ಪದಗಳು ಮತ್ತು ಅವುಗಳಿಗೆ ಸಮಾನಾರ್ಥಕವಾಗಿ 21,500 ಸಂವಾದಿ ಪದಗಳು ಇವೆ. ಕೊನೆಯಲ್ಲಿ ಇಂಗ್ಲಿಷ್ ಪದಗಳ ಸೂಚಿಯನ್ನು ಕೊಡಲಾಗಿದೆ. ಇದರಲ್ಲಿ, ಪ್ರಮುಖವಾಗಿ ಬಳಕೆಯಾಗುವ ಸುಮಾರು 1800 ಇಂಗ್ಲಿಷ್ ಆಡಳಿತ ಪದಗಳನ್ನು ಪಟ್ಟಿ ಮಾಡಲಾಗಿದೆ. ಇದರಿಂದ ಈ ಪದಕೋಶವು ಇಂಗ್ಲಿಷ್ - ಕನ್ನಡ ಪದಕೋಶ್ವೂ ಆಗಿ ಪ್ರಯೋಜನಕ್ಕೆ ಬರುತ್ತದೆ. ಮುಖ್ಯಭಾಗ ಪದಕೋಶದ ನಂತರ ನಾಲ್ಕು ಪರಿವಿಡಿಗಳಿವೆ. ಅವುಗಳಲ್ಲಿ ಕನ್ನಡ-ಇಂಗ್ಲಿಷ್ನಲ್ಲಿ 439 ಪದನಾಮಗಳು, 370 ಇಲಾಖೆ ನಿರ್ದೇಶನಾಲಯ, ನಿಗಮ, ಇತ್ಯಾದಿಗಳ ಹೆಸರುಗಳು ಮತ್ತು 644 ಪ್ರಮುಖ ಕೇಂದ್ರ/ರಾಜ್ಯ ಅಧಿನಿಯಮಗಳ ಹೆಸರುಗಳನ್ನು ಕೊಡಲಾಗಿದೆ. ಆಡಳಿತದಲ್ಲಿ ಕನ್ನಡ ಬಳಕೆಯಲ್ಲಿ ತೊಡಗುವ, ತೊಡಗಿರುವ ಸರ್ಕಾರಿ ನೌಕರರಿಗೆ, ಕನ್ನಡ ಕಲಿಯುವ ಕನ್ನಡೇತರರಿಗೆ, ಉದ್ದಿಮೆದಾರರು, ವ್ಯಾಪಾರಸ್ಥರು, ಸಾರ್ವಜನಿಕರು, ಅನುವಾದಕರು ಮತ್ತು ವಿದ್ಯಾರ್ಥಿಗಳಿಗೆ ಈ ಪದಕೋಶವು ಅತ್ಯಮೂಲ್ಯವಾಗಿದೆ.