Quantity
Product Description
ಕಷ್ಟಗಳ ನಡುವೆಯೇ ಹೃದಯವಂತರಾದನ, ಸಜ್ಜನಿಕೆಯ ನಡುವೆಯೂ ನಿಷ್ಠರ ಮನಸ್ಸಿನವರಾದ, ಒರಟು ದೇಹ ಮೃದು ಮನಸ್ಸು, ಜಾತಿವಾದದ ಜಿಗುಟು ಜೊತೆಗೆ ಅನಿರೀಕ್ಷಿತ ಔದಾರ್ಯ, ಅತ್ಯಂತ ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದ ಹೆಣ್ಣುಮಕ್ಕಳು ಹಾಗೂ ಹೇರಳವಾಗಿ ಕಂಡುಬರುವ ಲೈಂಗಿಕ ಹಗರಣಗಳು ಹೀಗೆ ಹಲವು ತೊಡಕುಗಳ ವರ್ಣರ೦ಜಿತ ಬದುಕಿನ ಉತ್ತರ ಕರ್ನಾಟಕದ ಸೀಮೆಯಿಂದ ಬಂದಿರುವ ಸತುವುಳ್ಳ ಬರಹಗಾರನಾದ ಹನುಮಂತ ಹಾಲಗೇರಿ ನಮಗೆ ಉಣಬಡಿಸಲಿರುವ ಹುಗ್ಗಿ ಇನ್ನೂ ಪಾಠಗೊಲ್ಲುತ್ತಿದೆ. ಆ ಹದ ದಕ್ಕಿಸಿಕೊಳ್ಳುವುದಕ್ಕೆ ಆತನಿಗೆ ಸಾಧ್ಯವಿದೆ ಎಂಬುದರ ಪುರಾವೆಯಾಗಿ ಈಗಾಗಲೇ ಪ್ರಕಟವಾಗಿರುವ ಎರಡು ಕೃತಿಗಳು ಜೊತೆಗೆ ಈ ಮೂರನೇ ಕೃತಿಯೂ ಸೇರಿಕೊಳ್ಳುತ್ತಿದೆ.
ಕತೆಯಲ್ಲಿ ಆತ ವಿವರಗಳನ್ನು ಕಟ್ಟಿಕೊಡಲು ನಿಂತಾಗ ಕಾಣಿಸುವ ಕಥನಗಾರಿಕೆಯ ಕುಶಲತೆ ಕಂಡು ನಾನು ಬಹಳ ಸಂತಸಪಟ್ಟಿದ್ದೇನೆ. ವರ್ತಮಾನದ ವಿವಿಧ ಬವಣೆಗಳನ್ನು ಕಥೆಗಳಾಗಿ ಮಂಡಿಸುವ ಆತನ ಉಮೇದು ಕಥನ ಕಲೆಯ ಅಂತರ್ಗತ ಅಂಶವಾಗಿ ಹೊಮ್ಮುವ ಸಾಮರ್ಥ್ಯದ ಬಗ್ಗೆಯೂ ಆತನ ಕಥೆಗಳು ಪುರಾವೆಯೊದಗಿಸುತ್ತಿವೆ. ಇತನ ಬರವಣಿಗೆಯ ಹಾದಿಯಲ್ಲಿ ಇನ್ನೂ ಭರಪೂರ ಸುದ್ದಿಗಳು ಬರಲಿವೆ ಎಂಬ ಭರವಸೇ ಹೋದಿದ್ದವನಾಗಿ ಈ ಸಂದರ್ಭದಲ್ಲಿ ಇತನಿಗೆ ಶುಭ ಹಾರೈಸುತ್ತಿದ್ದೇನೆ
Binding
Soft Bound
Author
Hanumantha Haligeri
Number of Pages
220
Publisher
Vishwapatha Prakashana
Publication Year
2019
Height
1 CMS
Weight
200 GMS
Length
22 CMS
Width
14 CMS
Language
Kannada