Product Description
ಅತ್ಯಂತ ಚಂಚಲವಾದ ವಸ್ತುಗಳಲ್ಲಿ ಮನಸ್ಸೂ ಒಂದು. ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಸುಮ್ಮನಿರುವಂತೆಯೂ ಇಲ್ಲ. ಮನಸ್ಸು ನೆಮ್ಮದಿಯಿಂದ ಇದ್ದರೆ, ಉಲ್ಲಾಸದಿಂದಿದ್ದರೆ ನಮ್ಮ ದೇಹದ ಆರೋಗ್ಯವೂ ಚೆನ್ನಾಗಿರುತ್ತದೆ. ಮನಸ್ಸು ಸರಿಯಿಲ್ಲದಿದ್ದರೆ ನಮ್ಮ ಶಕ್ತಿ ಸಾಮರ್ಥ್ಯಗಳೂ ಕಡಿಮೆಯಾಗುತ್ತವೆ. ಕೈಗೊಂಡ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ. ಪ್ರಸ್ತುತ ಪುಟ್ಟ ಪುಸ್ತಕದಲ್ಲಿ ನೆನಪಿನ ಕ್ರಿಯೆ ನಡೆಯುವ ರೀತಿ, ಮರೆವುಂಟಾಗಲು ಕಾರಣಗಳು, ನೆನಪು ಅಳಿಸಿಹೋಗುವಿಕೆ, ಅವಶ್ಯಕ ವಿಚಾರಗಳ ಬಗ್ಗೆ ನಮ್ಮ ಜ್ಞಾಪಕಶಕ್ತಿ ಚೆನ್ನಾಗಿರಬೇಕಾದರೆ ಏನು ಮಾಡಬೇಕು ? ಜ್ಞಾಪಕಶಕ್ತಿಯ ವೃದ್ಧಿಗೆ ಔಷಧವಿದೆಯೋ ? ಮರೆವು ವಿಪರೀತವಾದಾಗ ಚಿಕಿತ್ಸೆ ಏನು ? ವಿದ್ಯಾರ್ಥಿಗಳಿಗಾಗಿ ಬರೆದಿರುವ ಈ ಪುಸ್ತಕದಲ್ಲಿ ಇವುಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಇದೆ. ಓದಿ ನೋಡಿ.