Product Description
ನಮ್ಮ ದೇಶದ ಜಮೀನುದಾರರ ಹೊಲಗಳಲ್ಲಿ ದುಡಿಯುವ ಭೂಹೀನ ಕೃಷಿ ಕಾರ್ಮಿಕರ ಗೋಳಿನ ಕಥೆಯಿದು. ನಕ್ಸಲರೆಂದರೆ ಯಾರು ? ಅವರನ್ನೇಕೆ ಪ್ರಭುತ್ವದ ಆಳುಗಳಂತಿರುವ ಪೊಲೀಸರು ಹಿಂಸಿಸುತ್ತಾರೆ ? ಶೋಷಕರ ಪರ ನಿಂತು ಸರಕರವೇ ಶೋಷಣೆಗೆ ಇನ್ನಷ್ಟು ಇಂಬುಕೊಟ್ಟಾಗ ಜನ ಕ್ರಾಂತಿಯ ದಾರಿ ಹಿಡಿಯುತ್ತಾರೆ. ಮುಂದುವರಿದು ನಕ್ಸಲರಾಗಿ ಹೆಸರಿಸಲ್ಪಟ್ಟು ಶಸ್ತ್ರಾಸ್ತ್ರ ಹಿಡಿಯುತ್ತಾರೆ. ಸಶಸ್ತ್ರ ಕ್ರಾಂತಿಯೆಂದರೇನೇ ರಕ್ತಸಿಕ್ತ ಅಧ್ಯಾಯಗಳು. ಯಾವ ಸರಕಾರಿ ಕಾನೂನುಗಳು ಸಹಾ ಬದಲಿಸಲಾರದಷ್ಟು ಆಳವಾಗಿ ಬೇರೂರಿದ ಕೆಲವು ಅಮಾನವೀಯ ವ್ಯವಸ್ಥೆಗಳು ನಮ್ಮ ಮಧ್ಯೆ ಇವೆ. ತನ್ನ ಬಿಗಿ ಹಿಡಿತವನ್ನು ಅದೆಂದೂ ಸಡಿಲಿಸುವುದಿಲ್ಲ. ಕಾನೂನು ಬಂದರೂ ಅದು ಅನುಷ್ಠಾನದಲ್ಲಿ ಸೋಲುತ್ತದೆ. ಅಂಥ ಕಡೆ ಶೋಷಣೆಗೆ ಒಳಗಾದವರು ಹೋರಾಟ - ಕ್ರಾಂತಿಯ ದಾರಿ ಹಿಡಿಯುತ್ತಾರೆ. ಹೀಗೊಂದು ಸಂಘರ್ಷದ ಬದುಕಿನ ಚಿತ್ರಣವಿಲ್ಲಿದೆ.