Product Description
ಮಕ್ಕಳ ಮನಸ್ಸು ನಿಷ್ಕಲ್ಮಶವಾದುದು, ಸದಾ ಹೊಸತನಕ್ಕೆ ತುಡಿಯುವಂತಹದು. ಅಂತಹ ಮನಸ್ಸುಗಳಿಗೆ ನಾವು ಬರೀ ಓದು-ಬರಹವನ್ನಷ್ಟೆ ಹಚ್ಚಿದರೆ ಏಕತಾನತೆಂದ ನರಳಿ ಅಲ್ಲಿ ಕ್ರಿಯಾಶೀಲತೆ ಮುರುಟಿ ಹೋಗುತ್ತದೆ. ಕುತೂಹಲದಿಂದ ನೋಡುವ, ಕೇಳುವ, ಹೇಗೆ, ಏಕೆ ಎಂದು ಪ್ರಶ್ನೆಮಾಡುವ ಮನಸ್ಸುಗಳನ್ನು ನಾವು ಮತ್ತಷ್ಟು ಕ್ರಿಯಾತ್ಮಕವಾದ ಚಟುವಟಿಕೆಗಳಲ್ಲಿ ಹಚ್ಚಬೇಕು, ಪ್ರೊತ್ಸಾಹಿಸಬೇಕು. ಹಾಗಾದರೆ ಯಾವುವು ಆ ಸೃಜನಶೀಲ ಚಟುವಟಿಕೆಗಳು? ಲೇಖಕರು ಮಕ್ಕಳ ಮನಸ್ಸನ್ನು ಕ್ರಿಯಾತ್ಮಕವಾಗಿಸುವ ಅಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ತಿಳಿಸಿದ್ದಾರೆ. ಇವು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರಿಗೂ ಮತ್ತು ಹೆತ್ತವರಿಗೂ ಸಹಾಯಕವಾಗಬಲ್ಲವು.