Quantity
Product Description
ಹೊಯ್ಸಳ ದೊರೆಗಳಲ್ಲಿ ರಾಜ್ಯವನ್ನು ವಿಸ್ತರಿಸಿ ಸಾಮ್ರಾಜ್ಯವನ್ನಾಗಿ ಮಾರ್ಪಡಿಸುವ ಮನಸ್ಸು ವಿಷ್ಣುವರ್ಧನನಿಗಿತ್ತು. ಅದಕ್ಕಾಗಿ ಅವನು ನಿರಂತರ ಪ್ರಯತ್ನವನ್ನೂ ಮಾಡಿದ್ದ. ಆದರೆ ಕಲ್ಯಾಣದ ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯ" ಅವನ ಮಹದಾಸೆಯ ಮೇಲೆ ತಣ್ಣೀರೆರಚಿದ ಅವನು ಕೊನೆಯವರೆಗೂ ಕಲ್ಯಾಣ ಚಾಲುಕ್ಯರ ಸಾಮಂತನಾಗಿ ಉಳಿಯಬೇಕಾಯಿತು.
ವಿಷ್ಣುವರ್ಧನನ ಮರಣದ ನಂತರ ಹೊಯ್ಸಳ ಸಿಂಹಾಸನವನ್ನೇರಿದ ಇಮ್ಮಡಿ ನರಸಿಂಹ ತಂದೆಗೆ ತಕ್ಕ ಮಗನಾಗಿರಲಿಲ್ಲ. ಅವನು ಸಿಂಹಾಸನ ದೊರಕಿಸಿದ ಅಧಿಕಾರವನ್ನು ತನ್ನ ಸುಖ ಲೋಲುಪತೆಗಾಗಿ ಕಳೆದ
ಆದರೆ ಇಮ್ಮಡಿ ನರಸಿಂಹನ ಮಗ ಮತ್ತು ವಿಷ್ಣುವರ್ಧನನ ಮೊಮ್ಮಗ ಇಮ್ಮಡಿ ಬಲ್ಲಾಳನಲ್ಲಿ ಅಜ್ಜನಂತೆಯೇ ಚಕ್ರವರ್ತಿಯಾಗಿ ಮೆರೆಯುವ ಆದಮ್ಯ ಆಸಕ್ತಿ ಮತ್ತು ಉತ್ಸಾಹಗಳಿದ್ದವು. ಆ ಮಹದಾಸೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಅವನು ತಂದೆಯನ್ನೇ ಸಿಂಹಾಸನದಿಂದ ತಳ್ಳಿ ತಾನು ಸಿಂಹಾಸನವನ್ನೇರಿದ.
ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯ ವೃದ್ಧಾಪ್ಯದ ಕಾರಣದಿಂದ ಮರಣ ಹೊಂದಿದ. ಅವನ ಮಕ್ಕಳು ದುರ್ಬಲರಾಗಿದ್ದರು. ದಕ್ಷಿಣಭಾರತವನ್ನು ತನ್ನ ತೆಕ್ಕೆಗೆ ತಗೆದುಕೊಂಡಿದ್ದ ಸಾಮ್ರಾಜ್ಯವನ್ನು ಅವನ ಮಕ್ಕಳಿಂದ ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಚಾಲುಕ್ಯರ ಸಾಮಂತರಲ್ಲಿ ಹಲವರು ತಮ್ಮ ತಮ್ಮ ರಾಜ್ಯಗಳನ್ನು ಸ್ವತಂತ್ರಗೊಳಿಸಿಕೊಂಡರು. ಅವರ ದೌರ್ಬಲ್ಯತನವನ್ನೇ ಅವಕಾಶವನ್ನಾಗಿ ಉಪಯೋಗಿಸಿಕೊಂಡು ಚಾಲುಕ್ಯ ಸಾಮ್ರಾಜ್ಯವನ್ನು ದಕ್ಕಿಸಿಕೊಳ್ಳಲು ಕೆಲವರು ಹೆಣಗಿದರು.
ಚಾಲುಕ್ಯರ ಸಾಮಂತರಾಗಿದ್ದ ಸೇವುಣರು (ದೇವಗಿರಿ ಯಾದವರು) ಮತ್ತು ಹೊಯ್ಸಳರು ಉತ್ಸುಕರಾದರು. ಅವರಿಬ್ಬರ ಮಧ್ಯ ಹಲವು ಬಾರಿ ಯುದ್ಧಗಳಾದವು. ಎರಡೂ ಕನ್ನಡದ ರಾಜ್ಯಗಳೇ ಆದರೂ ಅವರು ಪರಸ್ಪರ ಹೊಡೆದಾಡಿದರು. ಅಂತಿಮವಾಗಿ ಹೊಯ್ಸಳ ಇಮ್ಮಡಿ ಬಲ್ಲಾಳ ತನ್ನ ರಾಜ್ಯವನ್ನು ಸಾಮ್ರಾಜ್ಯವನ್ನಾಗಿ ವಿಸ್ತರಿಸಿ ಚಕ್ರವರ್ತಿ ಎನ್ನಿಸಿಕೊಂಡ.
Binding
Hard Bound
Author
Dr Lakshman Kaunte
ISBN-13
9789348355225
Number of Pages
324
Publisher
Veeraloka Books Pvt Ltd
Publication Year
2025
Height
3 CMS
Length
22 CMS
Weight
500 GMS
Width
14 CMS
Language
Kannada