Select Size
Quantity
Product Description
ಪ್ರಸಿದ್ಧ ಲೇಖಕರಾದ ಜೋಗಿಯವರು ಈ ಕಾದಂಬರಿ ಕುರಿತು ಹೀಗೆ ಹೇಳಿದ್ದಾರೆ
ಭಾರತದ ಮಹಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ. ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ. ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಆಡ್ರ್ಯು ವಾ, ಥಾಮಸ್ ಜಾರ್ಜ್ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.
ಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಪ್ರಚಾರ ಆಗದಂತೆ, ಕಾಲಾನುಭವಕ್ಕೆ ಕುಂದಾಗದಂತೆ ಈ ಕಥೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಅನಾವರಣ ಮಾಡುತ್ತದೆ.
ಈಗಾಗಲೇ ಪುನರ್ವಸು ಮತ್ತು ಚೆನ್ನಭೈರಾದೇವಿ ಕಾದಂಬರಿಗಳ ಮೂಲಕ ಕನ್ನಡದ ಬಹುಮುಖ್ಯ ಕಾದಂಬರಿಕಾರ ಎಂದೆನಿಸಿಕೊಂಡಿರುವ ಗಜಾನನ ಶರ್ಮರು ಈ ಕಾದಂಬರಿಯಲ್ಲಿ ಮತ್ತೊಂದು ಎತ್ತರವನ್ನು ತಲುಪಿದ್ದಾರೆ. ಈ ಕಾದಂಬರಿಯ ಓದು ನನ್ನನ್ನು ಜ್ಞಾನವಂತನನ್ನಾಗಿಯೂ ಹೃದಯವಂತನನ್ನಾಗಿಯೂ ಮಾಡಿದೆ. ಓದಿದ ನಿಮಗೂ ಅದೇ ಆಗಲಿದೆ.
Binding
Soft Bound
Number of Pages
350
Author
Dr Gajaanana Sharma
Publication Year
2023
Publisher
Ankitha Pusthaka
Weight
500 GMS
Language
Kannada