Select Size
Quantity
Product Description
21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿ
ಗ್ರಾಮ ಸ್ವರಾಜ್. ಇದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ಗಾಂಧೀಜಿಯವರ ದೃಷ್ಟಿಯಂತೆ ಪ್ರತಿಯೊಂದು ಹಳ್ಳಿಯೂ ಸ್ವಾವಲಂಬಿಯಾಗಬೇಕು. ಇಂದು, ಭಾರತೀಯ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ, ನಾವು `ಆತ್ಮ-ನಿರ್ಭರ ಭಾರತ'ದ ಕನಸು ಕಾಣುತ್ತಿದ್ದೇವೆ. ಅಂದರೆ ಸ್ವಾವಲಂಬಿ ಭಾರತ. ಭಾರತ ಸ್ವಾವಲಂಬಿಯಾಗಲು ಏನು ಮಾಡಬೇಕು? ಗಾಂಧೀಜಿಯವರ ಕನಸು ನನಸಾಗಬೇಕಿದೆ. ಅಂದರೆ ಪ್ರತಿಯೊಂದು ಹಳ್ಳಿಯೂ `ಸ್ವಾವಲಂಬಿ' ಆಗಬೇಕು. 21 ನೇ ಶತಮಾನದಲ್ಲಿ ಅದನ್ನು ಸಾಧಿಸಲು, ನಾವು ವಿಶ್ವಸಂಸ್ಥೆಯು ಕರೆದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯನ್ನು ಮತ್ತು ಸೀಮಾತೀತ ತಂತ್ರಜ್ಞಾನಗಳನ್ನು ಊರುಗೋಲಾಗಿ ಬಳಸಬೇಕಾಗಿದೆ. ಸೀಮಾತೀತ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಾವು ಶ್ರಮಿಸಿದಾಗ ನಮ್ಮ ಗ್ರಾಮ ಪಂಚಾಯಿತಿಗಳು ಸ್ವಾವಲಂಬಿಗಳಾಗುತ್ತವೆ, ಅಂದರೆ ಅವು `ಸ್ವಾವಲಂಬಿ' ಗ್ರಾಮ ಪಂಚಾಯಿತಿಗಗಳಾಗುತ್ತವೆ. ಆಗ ಭಾರತವೂ `ಸ್ವಾವಲಂಬಿ'ಯಾಗುತ್ತದೆ. ಹಾಗಾದರೆ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಯಾವುವು? ಅವುಗಳನ್ನು ಸಾಧಿಸುವುದು ಹೇಗೆ? ಇದಕ್ಕಾಗಿ ಯಾವ ತಂತ್ರಜ್ಞಾನಗಳನ್ನು ಬಳಸಬಹುದು? ಅಪರೂಪದ ಈ ಪುಸ್ತಕ '21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿ' ವಿವಿಧ ಸೀಮಾತೀತ ತಂತ್ರಜ್ಞಾನಗಳನ್ನು ಬಳಸಿಕೊಂಡ ಯೋಜನೆಗಳ ಪ್ರಾಯೋಗಿಕ ಅನುಭವದ ಆಧಾರದ ಮೇಲೆ ವಿವರಿಸುತ್ತದೆ ಮತ್ತು ಗ್ರಾಮ ಪಂಚಾಯತಿಗಳು ಅಂತಹ ತಂತ್ರಜ್ಞಾನಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಹೇಳುತ್ತದೆ. ಚುನಾಯಿತ ಪ್ರತಿನಿಧಿಗಳಿಗೆ ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾಮಾನ್ಯ ಜನರಿಗೂ ಇದು ಉಪಯುಕ್ತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳೂ ಇದನ್ನು ಬಳಸಿಕೊಳ್ಳಬಹುದು.
Weight
1200 GMS
Length
28 CMS
Author
Dr Shankara K Prasad
Publisher
Sampoorna Swaraj Foundation
Publication Year
2023
Number of Pages
385
Binding
Hard Bound
Language
Kannada