Select Size
Quantity
Product Description
ನಲಸುಮಾರು 40 ವರ್ಷಗಳಿಂದಲೂ ಕನ್ನಡ ಕಾವ್ಯಕೃಷಿಯಲ್ಲಿ ತೊಡಗಿರುವ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರದು ಕಾವ್ಯ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಧ್ವನಿ. ‘ನಾನೊಂದು ಮರವಾಗಿದ್ದರೆ’, ‘ಚಪ್ಪಲಿ ಮತ್ತು ನಾನು’ ಕೃತಿಗಳು ಕನ್ನಡ ಕಾವ್ಯ ಲೋಕದಲ್ಲಿಯೇ ಭಿನ್ನ ಎನ್ನಿಸಿವೆಯಲ್ಲದೆ ಅವರಿಗೆ ಅಪಾರ ಕಾವ್ಯಾಭಿಮಾನಿಗಳನ್ನೂ ಸೃಷ್ಟಿಸಿವೆ. ದಲಿತ ಸಂವೇದನೆಯನ್ನೂ ಮೀರಿದ ಮಾನವೀಯ ಕಳಕಳಿಯ ಅವರ ಕವಿತೆಗಳು ಇಂದಿಗೂ ಹೊಸ ಹೊಳಹುಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಕಾವ್ಯವಲ್ಲದೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿಯೂ ಕೃಷಿ ಮಾಡಿರುವ ಮೂಡ್ನಾಕೂಡು ಅವರು ವಿವಿಧ ದೇಶಗಳಿಗೆ ಆಹ್ವಾನಿತರಾಗಿ ತೆರಳಿ ತಮ್ಮ ಕಾವ್ಯದ ಗಂಧವನ್ನು ಅಲ್ಲೆಲ್ಲ ಪಸರಿಸಿದ್ದಾರೆ. ಹಾಗೆ ತಾವು ಕೈಗೊಂಡ ವಿವಿಧ ದೇಶಗಳ ಕಾವ್ಯಯಾನದ ಅನುಭವಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ.
Author
Dr Mudnakudu Chinnaswamy
Binding
Soft Bound
Publication Year
2024
Publisher
Bahuroopi
Length
20 CMS
Weight
300 GMS
Width
20 CMS
Language
Kannada