Product Description
ಇಲ್ಲಿ ನವೀರಾದ ಭಾವನೆಗಳಿವೆ. ಪ್ರೀತಿಯ ಮಧುರ ಪುಳಕಗಳಿವೆ, ಇಷ್ಟದ ಜೀವದೆದುರು ಪ್ರೀತಿ ಹೇಳಲಾಗದವರ ತಲ್ಲಣಗಳಿವೆ, ಕನವರಿಕೆಗಳಿವೆ. ಅನಿವಾರ್ಯವಾಗಿ ದೂರಾಗಿ ಬದುಕುತ್ತಿರುವ ಪ್ರೇಮಿಗಳ ಎದೆಯಾಳದ ಮಾತುಗಳಿವೆ. ಪ್ರೀತಿಸಿದಾಕೆ ತೊರೆದು ಹೋಗಿ ಅದೆಲ್ಲೋ ಮೂಲೆ ಹಿಡಿದು ಕೂತ ಒಬ್ಬಂಟಿ ಹುಡುಗನ ಕನವರಿಕೆಗಳಿವೆ. ಮನಸ್ಸಿಲ್ಲದ ಮನಸ್ಸಿಂದ ಬೇರೆಯವನ ಕೈಹಿಡಿದ ಹೆಣ್ಣು ಮಗಳ ಬಿಕ್ಕಳಿಕೆಗಳಿವೆ. ವಿಷಾಧ, ಹಂಬಲಿಕೆ, ಹುಡುಕಾಟ, ಪರದಾಟ... ಪ್ರೀತಿಯ ಸ್ವತ್ತುಗಳಂತಿರುವ ಪ್ರತೀ ಭಾವನೆಗಳೂ ಇಲ್ಲಿವೆ.