Quantity
Product Description
ಪೊನ್ನಾಚಿ, ಮಲೆಮಹದೇಶ್ವರ ಬೆಟ್ಟದ ಪಕ್ಕದಲ್ಲಿರುವ ಪುಟ್ಟ ಹಳ್ಳಿ, ಸುತ್ತಲೂ ದಟ್ಟವಾದ ಕಾಡಿನಿಂದ ಆವರಿಸಿರುವ ಹಳ್ಳಿ, ಆ ಬಗ್ಗೆ ನಾವು ದೂರ ನಿಂತು ರೊಮ್ಯಾಂಟಿಕ್ ಆಗಿ ಮಾತನಾಡಬಹುದಾದರೂ ಅಲ್ಲಿಯ ಸುಖ ದಃಖಗಳು ಅಲ್ಲಿ ವಾಸಮಾಡುವವರಿಗೇ ಗೊತ್ತು. ಈ ಪ್ರದೇಶದ ಮಣ್ಣಿನ ಗುಣವೋ ಗಾಳಿಯ ಗುಣವೋ ಗೊತ್ತಿಲ್ಲ, ಇಲ್ಲಿ ಅನೇಕ ಪ್ರತಿಭಾವಂತರೂ ಸೃಜನಶೀಲರೂ ಹುಟ್ಟಿದ್ದಾರೆ. ಪ್ರಕಾಶ್ ಪುಟ್ಟಪ್ಪ ಅಂತಹವರಲ್ಲಿ ಒಬ್ಬರು. ಅವರ ಮೂಲ ಹೆಸರು ಜಯಪ್ರಕಾಶ್, ಚಾಮರಾಜನಗರ ಸಮೀಪದ ಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲಾ ಉಪಾಧ್ಯಾಯರು, ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಸಾಹಿತ್ಯವನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿದವರಲ್ಲ ಮತ್ತು ಬರವಣಿಗೆಗೂ ಮನಸ್ಸು ಕೊಟ್ಟಿರಲಿಲ್ಲ. ಮೊದಲು ಕವಿತೆಗಳ ಪುಸ್ತಕ 'ಮಣ್ಣಿಗೆ ಬಿದ್ದ ಮಳೆ' ಹೊರತಂದರು. ನಂತರ ಕತೆ ಬರೆಯಲು ಆರಂಭಿಸಿದರು.
ಇದೀಗ ಹದಿನಾಲ್ಕು ಕತೆಗಳ ಸಂಕಲನ ಹೊರತರುತ್ತಿದ್ದಾರೆ. ಇಲ್ಲಿಯ ಆನೇಕ ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ತಲುಪಿದೆ. ಕೆಲವು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಮತ್ತು ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆಯನ್ನೂ ಗಳಿಸಿದೆ. ಪ್ರಕಾಶ್ ಪುಟ್ಟಪ್ಪ ಕವಿ ಮನಸ್ಸಿನ ಕತೆಗಾರ, ಇವರಿಗೆ ಈಸೂರು ಹೋರಾಟ ಒಂದು ಕತೆಗೆ ಪ್ರೇರಣೆ ನೀಡಿರುವುದು ಮತ್ತು ಅದನ್ನು ವಿಭಿನ್ನವಾಗಿ ನಿರ್ವಹಿಸಿರುವುದು ಆಚ್ಚರಿಯನ್ನು ತರುತ್ತದೆ. ತಮ್ಮ ಭಾಗದ ಧರ್ಮ ಸಂಬಂಧಿಯಾದ ಆಚರಣೆಗಳನ್ನೂ ಆಧರಿಸಿದ ಕತೆಯೂ ಇದೆ. ಭಾಷೆ, ನಿರ್ವಹಣೆ ಮತ್ತು ವಸ್ತುವಿನ ದೃಷ್ಟಿಯಿಂದ ನವೀನವೂ ಲವಲವಿಕೆಯದ್ದೂ ಆಗಿದೆ.
Author
Prakash Puttappa
Binding
Soft Bound
ISBN-13
9788198226396
Number of Pages
128
Publication Year
2025
Publisher
Amulya Pustaka
Height
1 CMS
Length
22 CMS
Weight
100 GMS
Width
14 CMS
Language
Kannada