Select Size
Quantity
Product Description
ಮಲೆನಾಡು ಭಾಗದಲ್ಲಿ ಹುಲಿಗೆ ಪಟ್ಟಿಹುಲಿಯೆಂದು ಮತ್ತು ಚಿರತೆಗೆ ಗೇರ್ಕಾಳ ಹುಲಿ, ಚುಕ್ಕಿಹುಲಿ, ಚಿಟ್ಟೆಹುಲಿಯೆಂದು ಕರೆಯುತ್ತಾರೆ. ಹುಲಿಯ ಮೈಮೇಲೆ ಉದ್ದನೆಯ ಪಟ್ಟಿಯ ವಿನ್ಯಾಸ ಇರುವುದರಿಂದ ಅದಕ್ಕೆ ಪಟ್ಟಿಹುಲಿಯೆಂದು ಹಾಗೂ ಚಿರತೆಯ ಮೈಮೇಲಿನ ವಿನ್ಯಾಸ ಗೇರುಹಣ್ಣಿನ ಬೀಜದ ಹಾಗೆ, ಚುಕ್ಕೆಗಳ ಹಾಗೆ, ಚಿಟ್ಟೆಯ ಹಾಗೆಯೂ ಕಾಣುವುದರಿಂದ ಚಿರತೆಗೆ ಗೋರ್ಕಾಳ ಹುಲಿ, ಚುಕ್ಕಿಹುಲಿ, ಚಿಟ್ಟೆಹುಲಿಯೆಂಬ ನಾನಾ ಹೆಸರಗಳೂ ಇವೆ.
-'ಚಿಟ್ಟೆಹುಲಿ' ಕಥೆಯಿಂದ
ಜಿಂಕೆಯನ್ನು ಬೇಟೆಯಾಡುವ ಚಿರತೆ ತನ್ನ ಮರಿಗಳಿಗೆ ಶೂರನಂತೆ ಕಂಡರೂ ಜಿಂಕೆಯ ಮರಿಗಳಿಗೆ ಕಟುಕನೆ. ಒಬ್ಬ ವ್ಯಕ್ತಿಯನ್ನು ಆತ ಒಳ್ಳೆಯವ ಅಥವಾ ಕೆಟ್ಟವ ಎಂದು ನಿರ್ಧರಿಸುವುದು ನಮ್ಮ ದೃಷ್ಟಿಕೋನದಲ್ಲೇ ಆದರೂ ಅಲ್ಲಿನ ವಸ್ತುಸ್ಥಿತಿ ಮತ್ತು ಅಂದಿನ ಪ್ರಾಮುಖ್ಯತೆಗೆ ಒಳಪಟ್ಟ ಸನ್ನಿವೇಶದ ಮೇಲೆ ನಿರ್ಧರಿತ. ಅಂತೆಯೇ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲನಾದವನನ್ನು ಸೋತವನೆಂದು, ಹೇಡಿಯೆಂದು ಕರೆದರೂ ಆತ ಸಮಯದ ಆಳ್ವಿಕೆಯಲ್ಲಿ ಸರಿ ತಪ್ಪುಗಳ ಜೊತೆ ಸೆಣಸಿ ಸಮಯದ ತೀರ್ಪಿಗೆ ತಲೆಬಾಗಿದವನು.
-'ವೆನಿಲ್ಲಾ' ಕಥೆಯಿಂದ
Weight
300 GMS
Length
22 CMS
Height
1 CMS
Author
Rakshith Thirthahalli
Publisher
Concave Media CO
Publication Year
2023
Number of Pages
59
Binding
Soft Bound
Language
Kannada