Quantity
Product Description
A Collection of Essays
ಸರಸ ಕೃತಿಯು ಎ. ಈಶ್ವರಯ್ಯ ಅವರ ಲಲಿತ ಪ್ರಬಂಧಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಸರಸದಲ್ಲಿ ನವುರಾದ ಜೀವನ ಚಿತ್ರಣವಿದೆ. ಸಂಸಾರದಲ್ಲಿ ಪ್ರೀತಿ ವಿಶ್ವಾಸವನ್ನು ಬೆಸೆಯಬಲ್ಲ ಶಕ್ತಿ ಅದರಲ್ಲಿದೆ. ಪ್ರಣಯದ ನಿಜವಾದ ಅರ್ಥ ಒದಗಿಸುವ, ಸರಸ ದಾಂಪತ್ಯದ ವಿವಿಧ ಆಯಾಮಗಳನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಸರಸದಲ್ಲಿ ಪ್ರೇಮ ಅದರಲ್ಲೂ ದಾಂಪತ್ಯದ ಚೌಕಟ್ಟಿನ ಪ್ರೇಮವೇ ಸ್ಥಾಯಿಯಾಗಿದೆ. ನಮ್ಮ ನಿತ್ಯ ಬದುಕನ್ನು ಒಂದು ಸೂತ್ರದಲ್ಲಿ ಬಂಧಿಸಿಡುವ ದಾಂಪತ್ಯ ಸಂಬಂಧಗಳ ನವುರಾದ ನೋಟವನ್ನು ಈಶ್ವರಯ್ಯ ಅಪ್ಯಾಯಮಾನವಾಗಿ ಕಟ್ಟಿಕೊಡುತ್ತಾರೆ. ಇದೇ ಅವರ ಬರಹದ ಶಕ್ತಿ. ದಾಂಪತ್ಯದಲ್ಲಿ ಸರಸ ವಿರಸ ಸಾಮಾನ್ಯ ಕ್ಷಣಾರ್ಧದಲ್ಲಿ ವಾಸ್ತವದಿಂದ ಕಲ್ಪನಾಲೋಕಕ್ಕೆ ಸೆಳೆದೊಯ್ಯಬಲ್ಲ ಶಕ್ತಿ ಈಶ್ವರಯ್ಯನವರ ಸರಸಕ್ಕಿದೆ. ಇದೊಂದು ದಾಂಪತ್ಯದ ನೀತಿ ಸಂಹಿತೆ ಎಂದು ವಿಶ್ಲೇಷಿಸಲಾಗಿದೆ.
Publication Year
1998
Number of Pages
240
Publisher
Ankitha Pusthaka
Author
Eshwarayya
Binding
Soft Bound
Height
10 CMS
Weight
400 GMS
Length
10 CMS
Width
1 CMS
Language
Kannada