Select Size
Quantity
Product Description
ಮನುಷ್ಯ ಹಾಗೂ ನಿಸರ್ಗದ ಒಡನಾಟವನ್ನು ಕುತೂಹಲಕಾರಿಯಾಗಿ ನಿರೂಪಿಸುವ ಅಬ್ಬೆ ಕಾದಂಬರಿ, ಆಳದಲ್ಲಿ ಹಲವಾರು ಸಂಕೀರ್ಣ ವಿಚಾರಗಳನ್ನು ಎತ್ತುತ್ತದೆ. ಈ ಕೃತಿಯನ್ನು ಕುರಿತು ಲೇಖಕ ಬೆಳಗೋಡು ರಮೇಶ ಭಟ್ ಹೇಳಿರುವುದು ಹೀಗಿದೆ:
"ಕಟ್ಟುಕಥೆಯ ವ್ಯಾಪ್ತಿಯಿಂದ ಒಟ್ಟು ಕಥೆಯನ್ನು ಹೊರಗಿಡುವ ಎರಡು ಆಯಾಮಗಳನ್ನು ಇಲ್ಲಿನ ಕಥಾಶಿಲ್ಪದಿಂದ ಪ್ರತ್ಯೇಕಿಸಿ ಗುರುತಿಸಿದಾಗ ಶಶಿಧರ ಹಾಲಾಡಿಯವರ ಕಥನಕಲೆಯ ವೈವಿಧ್ಯ ಮತ್ತು ವೈಶಿಷ್ಟ್ಯ ಮನದಟ್ಟಾಗುತ್ತದೆ.ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಕಲ್ಲೂರಾಯರೊಂದಿಗೋ,ದಡ್ಡ(ನಂತೆ ಕಾಣಿಸುವ)ಭಾಸ್ಕರನೊಂದಿಗೋ ಬೆಟ್ಟ ಗುಡ್ಡಗಳಲ್ಲಿ ಅಲೆಯುತ್ತಾ ನಿರೂಪಕ ಕಾಣುವ ಪುತ್ರಜಾಜಿ ಮೊದಲಾದ ಅಪರೂಪದ ಸಸ್ಯವೈವಿಧ್ಯಗಳೇ ಇರಬಹುದು, ಅಷ್ಟೇ ಅಪರೂಪದ ಪೆಂಗೊಲಿನ್ ರೀತಿಯ ಪ್ರಾಣಿ,ಅಪರಿಚಿತ ಗೂಬೆ,ದಂತಕತೆಯಂತೆ ಇರುವ ಅಬ್ಬೆ ಜೇಡ,ಪ್ಲಾಮಿಂಗೋ ಹಕ್ಕಿಗಳು,ಕಲ್ಕೆರೆಯ ಕೆರೆ ಏರಿಯ ಮರದಲ್ಲಿ ಗೂಡು ಕಟ್ಟಿಕೊಂಡಿರುವ ಕೊಕ್ಕರೆಗಳೇ ಮೊದಲಾದ ಜೀವ ವೈವಿಧ್ಯವೇ ಇರಬಹುದು,ಅವುಗಳನ್ನು ಸೂಕ್ಷ್ಮವಾಗಿ ಅವಲೋಕಿಸುವಲ್ಲಿ ಮತ್ತು ನಿರೂಪಿಸುವಲ್ಲಿ ಬಿಜಿಎಲ್ ಸ್ವಾಮಿ ಮತ್ತು ಪೂಚಂ ತೇಜಸ್ವಿಯವರು ಸೃಷ್ಟಿಸಿ ಕೈಬಿಟ್ಟ ನಿಗೂಢ ಜಗತ್ತೊಂದರ ಮುಂದುವರಿಕೆಯಂತೆ ಕಾಣಿಸುತ್ತದೆ".
Author
Shashidhara Halady
ISBN-13
9789392230370
Publication Year
2022
Binding
Soft Bound
Publisher
Ankitha Pusthaka
Number of Pages
260
Weight
400 GMS
Width
30 CMS
Language
Kannada