Select Size
Quantity
Product Description
ಇಲ್ಲಿನ ಪ್ರತಿ ಕವಿತೆಯನ್ನೂ ಎತ್ತಾಡಿ ಅವುಗಳ ವಿಶೇಷಗಳನ್ನು ಪರಿಗಣಿಸ ಬಹುದು. ಈ ಬರವಣಿಗೆಯಲ್ಲಿ ನನ್ನ ಉದ್ದೇಶ ಅದಲ್ಲ. ಪ್ರೀತಿಯ ರೀತಿ ಒಂದೇಬಗೆಯಲ್ಲ ಎಂದು ಸಾರುವ ಕವಿಯ ಮಾರ್ಗವನ್ನು ನನಗೆ ಕಂಂಡಂತೆ ಗುರುತಿಸುವುದು ನನ್ನ ಉದ್ದೇಶವಾಗಿತ್ತು. ಬಿಆರ್ಎಲ್ರಂತಹ ಮಾಗಿದ ಕವಿಯ ಕವಿತೆಗಳು ಓದುಗರನ್ನು ಒಂದೇ ಅರ್ಥಕ್ಕೆ ಮಿತಗೊಳಿಸಲಾರವು ಎನ್ನುವ ತಿಳುವಳಿಕೆಯೂ ನನಗಿದೆ. ಪ್ರೀತಿ, ಅದರ ರೀತಿ, ಅದರ ಮೋಡಿ, ಅದರ ಮಜಲುಗಳು, ಅದರ ರೂಪಾಂತರಗಳು, ಬೇಂದ್ರೆಯೆನ್ನುವಂತೆ ಅದರ 'ಮೂರು ದಿನದ ಆಟ', ಮತ್ತು ಹೆಣ್ಣುಗಂಡು ಅದನ್ನು ಪರಿಭಾವಿಸುವ ಬಗೆ ಕವಿಗೆ ಕಾಡುವ ತೀವ್ರತೆಯಲ್ಲೇ ಸಾಮಾನ್ಯನಿಗೂ ಕಾಡುವುದರಿಂದ ಪ್ರೀತಿಯ ಮೇಲಿನ ಕವಿತೆಗಳು ಎಲ್ಲರನ್ನು ಮುಟ್ಟುತ್ತವೆ. ವ್ಯಕ್ತ ಮತ್ತು ಅವ್ಯಕ್ತಗಳ ನಡುವಿನ ಕಂದರ ತುಂಬಿದಷ್ಟೂ ಕವಿ ಪ್ರಾಮಾಣಿಕನಾಗುತ್ತಾನೆ. ಆ ಗುಣವೇ ಓದುಗನನ್ನು ಅವನ ಕವಿತೆಗಳೆಡೆಗೆ ಸೆಳೆಯುತ್ತದೆ. ಬಿಆರ್ಎಲ್ ಕವಿತೆಗಳ ವಿಶೇಷಗುಣವಿದು. ಅತ್ಯಂತ ಪರಿಚಿತ ಸಂದರ್ಭಗಳನ್ನು ಪರಿಚಿತ ಪ್ರತಿಮೆಯೊಳಗೆ ಪರಿಚಿತ ಭಾಷೆಯಲ್ಲಿ ಕಾವ್ಯವಾಗಿಸು ವುದರಿಂದ ಅವರು ಜನಮನವನ್ನು ಗೆದ್ದಿದ್ದಾರೆ.
Weight
150 GMS
Length
22 CMS
Width
14 CMS
Height
1 CMS
Author
B R Lakshmana Rao
Publisher
Sapna Book House Pvt Ltd
Publication Year
2023
Number of Pages
112
ISBN-13
9789354565533
Binding
Soft Bound
Language
Kannada