Product Description
ಮಾನವನಿಗೆ ಓದು, ಹಣ, ಅಂತಸ್ತುಗಳು ಮಾತ್ರವೇ ಮುಖ್ಯವಲ್ಲ. ನಾವು ಯಾವ ಕೆಲಸ ಮಾಡಿದರೆ ತಂದೆ-ತಾಯಿಯರಿಗೆ ಸಂತೋಷವಾಗುತ್ತದೆಯೋ ಆ ಕೆಲಸ ಮಾಡಬೇಕು. ಅದರಿಂದ ಕೇಳದೆಯೇ ಅವರ ಆಶೀರ್ವಾದ ನಮಗೆ ಸಿಗುತ್ತದೆ. ಆ ಆಶೀರ್ವಾದಗಳು ನಮ್ಮಲ್ಲಿ ವಿದ್ಯೆ, ವಿನಯ, ವಿವೇಕಗಳಿಗೆ ದಾರಿ ಮಾಡಿಕೊಡುತ್ತವೆ. ಕೆಲವರು ತಾಯಿ-ತಂದೆಯರು ಅವರ ಕಡೆಯ ದಿನಗಳಲ್ಲಿ ಅನಾರೋಗ್ಯದಿಂದ ನಿಸ್ಸಹಾಯಕರಾಗಿ ತಮ್ಮ ಮಕ್ಕಳ ಆದರಣೆಯನ್ನೂ, ಅನುರಾಗವನ್ನೂ ಎದುರುನೋಡುತ್ತಿರುವಾಗ ಅವರ ಮಕ್ಕಳೇನೋ ಓದು-ಉದ್ಯೋಗಗಳ ಕಾರಣ ತೋರಿಸಿ ಸ್ವದೇಶವನ್ನು ಬಿಟ್ಟು ವಿದೇಶಗಳಲ್ಲೇ ತಿರುಗುತ್ತ ತಮ್ಮ ತಾಯಿ-ತಂದೆಯರ ಬಗ್ಗೆ ಅಧರ್ಮವಾಗಿ ಪ್ರವರ್ತಿಸುತ್ತಿರುತ್ತಾರೆ. ಇಂತಹ ಹಲವಾರು ದುರ್ಗುಣಗಳನ್ನ ಬಿಟ್ಟಾಗ ಮಾತ್ರ ಮಾನವರ ಬದುಕು ಸಾರ್ಥಕವಾಗುತ್ತದೆಂದು ಈ ಕೃತಿಯಲ್ಲಿರುವ ಅಪರೂಪದ ಕಥೆಗಳು ನಿರೂಪಿಸುತ್ತವೆ