Quantity
Product Description
ಪಂಚತಂತ್ರವು ಸಾವಿರಾರು ವರ್ಷಗಳ ಹಳೆಯ ರಚನೆಯಾದರೂ, ನಮ್ಮ ಈಗಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿ ನಿಲ್ಲಬಲ್ಲ ಕೃತಿ. ಸಮಾಜವು ಯಾವಾಗಲೂ ಧರ್ಮದ ಆದರ್ಶದಂತೆ ನಡೆಯುವುದಿಲ್ಲವೆಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮದ ದಾರಿಯಲ್ಲಿ ನಡೆಯಲು ಏನೇನು ತಂತ್ರವನ್ನು ಮಾಡಬೇಕೋ ಅವೆಲ್ಲವನ್ನೂ ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬುದು ಪಂಚತಂತ್ರದಿಂದ ಕಲಿಯಬಹುದಾದ ಮುಖ್ಯವಾದ ಪಾಠ. ರಾಜಧರ್ಮ, ಮೈತ್ರಿಧರ್ಮ, ಶತ್ರುನಿಗ್ರಹ, ಸೇವಾವೃತ್ತಿ, ಬುದ್ಧಿಯ ಬಳಕೆ, ಮೂರ್ಖರೊಂದಿಗಿನ ವ್ಯವಹಾರ, ಸ್ವಾರ್ಥ ಸಾಧನೆ, ತಂತ್ರಗಳ ಬಳಕೆ ಮುಂತಾದ ಹಲವು ವಿಚಾರಗಳನ್ನು ಕುತೂಹಲಕಾರಿಯಾದ ಕಥೆಗಳ ಮೂಲಕ ವಿವರಿಸುವ ಪಂಚತಂತ್ರದ ನಿಜವಾದ ಪ್ರಯೋಜನವನ್ನು ಪಡೆಯಲು ಸರಳೀಕರಿಸಿದ ಮಕ್ಕಳ ಪುಸ್ತಕಗಳಿಗೆ ಮೊರೆಹೋಗದೆ, ಮೂಲವನ್ನು ಓದುವುದು ಅವಶ್ಯಕ. ಮೂಲ ಪಂಚತಂತ್ರವನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಿದು.
ಈ ಪುಸ್ತಕದಲ್ಲಿ ಪಂಡಿತ ವಿಷ್ಣುಶರ್ಮ ವಿರಚಿತ ಮೂಲ ಸಂಸ್ಕೃತ ಪಂಚತಂತ್ರದ ಸಂಪೂರ್ಣ ಕನ್ನಡಾನುವಾದವನ್ನು ಕೊಡಲಾಗಿದೆ. ಮಿತ್ರಭೇದ ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ, ಲಬ್ಧಪ್ರಣಾಶ ಹಾಗೂ ಅಪರೀಕ್ಷಿತಕಾರಕ ಎಂಬ ಪಂಚತಂತ್ರದ 5 ತಂತ್ರಗಳ 5 ಸೂತ್ರ ಕಥೆಗಳು ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ. ಮಕ್ಕಳಿಗಾಗಿ ಈಗ ಲಭ್ಯವಿರುವ ಪಂಚತಂತ್ರದ ಕಥೆಗಳಲ್ಲಿ ಮೂಲ ಆಶಯವು ಕಳೆದುಹೋಗಿರುವ ಹಿನ್ನಲೆಯಲ್ಲಿ, ಮೂಲ ಪಂಚತಂತ್ರವನ್ನು ಯಥಾವತ್ತಾಗಿ ಕನ್ನಡ ಓದುಗರಿಗೆ ಈ ಪುಸ್ತಕವು ಪರಿಚಯಿಸುತ್ತದೆ.
This book provides an unabridged Kannada translation of Vishnu Sharma's original Sanskrit Panchatantram. It includes 5 main stories and 70 sub-stories from the 5 tantras of Panchatantra namely, Mitrabheda, Mitrasamprapti, Kakolukiya, Labdhapranasha and Aparikshitakaraka. The original intent of the Panchatantra stories has mostly been lost in the currently available childrens' books on Panchatantra. With this background, this book attempts to provide the complete translation of original Panchatantra to Kannada readers.
ISBN-13
9789353611293
Binding
Soft Bound
Author
Bharata B Rao
Publication Year
2018
Height
10 CMS
Width
1 CMS
Length
10 CMS
Weight
800 GMS
Language
Kannada