Quantity
Product Description
ಇತಿಹಾಸ ಸೇರಿಹೋದ ಹಳೆಯ ಕತೆಗಳೆಲ್ಲಾ ಇದೀಗ ಹೊಸ ರೀತಿಯ ಉಡುಪು ತೊಟ್ಟು ಹೊಚ್ಚ ಹೊಸದಾಗಿ ಬರುತ್ತಿವೆ. ಮನುಷ್ಯನ ಮೆದುಳು ಬೆಳೆದಂತೆಲ್ಲಾ ಪ್ರಾಣಿಗಳ ಬುದ್ದಿವಂತಿಕೆಯೂ ಬೆಳೆಯುತ್ತಿದೆ. ಹಿಂದಿನ ಕಾಲದ ಮನುಷ್ಯ ಪ್ರಾಣಿಗಳು ಗತಿಸಿದಂತೆಲ್ಲಾ ಆಧುನಿಕ ಮಾನವನ ಜತೆ ಹೊಸ ಹೊಸ ಪ್ರಾಣಿಪಕ್ಷಿಗಳು ಹೆಜ್ಜೆ ಹಾಕುತ್ತಿವೆ. ಹೊಸ ರೀತಿಯ ಕತೆಗಳು ಮೈದಾಳುತ್ತವೆ. ಮಕ್ಕಳು ಈ ಕತೆಗಳನ್ನು ಓದಿ ಇನ್ನಷ್ಟು ಬುದ್ದಿವಂತರಾದರೆ ಆಶ್ಚರ್ಯವೇನೂ ಇಲ್ಲ. ಪೀಳಿಗೆಯಿಂದ ಪೀಳಿಗೆಗೆ ಕತೆಗಳು ಇನ್ನಷ್ಟು ಮಾರ್ಪಾಡುಗೊಂಡು ಹೊಸ ಪೀಳಿಗೆಗೆ ಖುಷಿ ಕೊಡಬಲ್ಲವು. ಗುಂಡುರಾವ್ ದೇಸಾಯಿ : ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ಮಕ್ಕಳ ಸಾಹಿತ್ಯದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿ ರಾಯಚೂರು ಜಿಲ್ಲೆಯ ಮಸ್ಕಿಯವರು. ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಣೆ. 1 ಇವರ 'ನಮ್ಮೂರ ಹಳ್ಳ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿ.ಎಸ್ಸಿ ಹಾಗೂ ಬಿ.ಸಿ.ಎ. ಮೊದಲ ಸೆಮಿಸ್ಪರ್ಗೆ ಪಠ್ಯವಾಗಿದೆ. ಇವರ ಹಲವು ಕತೆ, ಕವಿತೆಗಳನ್ನು ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ, ಧಾರವಾಡ - ಬೆಂಗಳೂರು ಇವರು ಪೂರಕ ಪಠ್ಯಗಳಾಗಿ ಬಳಸಿಕೊಂಡಿದ್ದಾರೆ. ಮಕ್ಕಳಿಗಾಗಿ ಹಲವಾರು ಕೃತಿರಚನೆ ಮಾಡಿದ್ದಾರೆ. ಇವರ ಮಕ್ಕಳ ಕಾದಂಬರಿಗೆ ಜೆ. ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ಹಾಗೂ ಕಲಬುರಗಿಯ ಕನ್ನಡ ನಾಡು ಹಾಗೂ ಲೇಖಕರ ಸಹಕಾರಿಯ 'ಉತ್ತಮ ಕಾದಂಬರಿ ಪ್ರಶಸ್ತಿ' ದೊರಕಿದೆ
Author
Gundurao Desai
Binding
Soft Bound
Number of Pages
64
Publication Year
2025
Publisher
Nava Karnataka Publications Pvt Ltd
Height
1 CMS
Length
22 CMS
Weight
100 GMS
Width
14 CMS
Language
Kannada