Product Description
ಗಾಂಧಿ, ಅಂಬೇಡ್ಕರ್ ಹಾಗೂ ಸಮಾಜವಾದಗಳೊಂದು ತ್ರಿಕೋಣ-ಪರಸ್ಪರ ಎದುರುಬದುರಾಗಿದ್ದರೂ ಒಂದಕ್ಕೊಂದು ಸಂಬದ್ಧ. ಗಾಂಧಿ ಹಾಗೂ ಅಂಬೇಡ್ಕರ್ ಇಬ್ಬರೂ ಧಾರ್ಮಿಕರೇ. ಗಾಂಧಿ ಹಿಂದೂ ಧರ್ಮವನ್ನು ನಂಬಿದರು. ಅಂಬೇಡ್ಕರ್ ಬೌದ್ಧ ಧರ್ಮವನ್ನು ನಂಬಿದರು. ಗಾಂಧಿ ಹಿಂದೂ ಧರ್ಮದಲ್ಲಿ ಸಮಾಜವಾದ ಕಂಡುಕೊಂಡರೆ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಸಮಾನತೆಯ ವಿಕೃತಿಯನ್ನು ಕಂಡರು, ತಮ್ಮ ಸಮಾಜವಾದವನ್ನು ಬುದ್ಧ ಧರ್ಮದಲ್ಲಿ ಕಂಡುಕೊಂಡರು. ಪರಸ್ಪರ ವಿರೊಧಾತ್ಮಕ ನಿಲುವುಗಳನ್ನು ತಳೆದಿದ್ದರೂ ಪರಸ್ಪರ ಗೌರವವನ್ನೂ ಉಳಿಸಿಕೊಂಡಿದ್ದರು. ಇವರಿಬ್ಬರನ್ನು ಸೈದ್ಧಾಂತಿಕ ನೆಲೆಯಲ್ಲಿ ಒಟ್ಟು ಸೇರಿಸುವ ಕೆಲಸ ಮಾಡಿದ್ದು ಸಮಾಜವಾದ-ತ್ರಿಕೋಣದ ಎರಡು ಭುಜಗಳನ್ನು ಒಟ್ಟು ಸೇರಿಸುವ ಮೂರನೆಯ ಭುಜದಂತೆ. ಗಾಂಧಿ ತನ್ನನ್ನು ಸಮಾಜವಾದಿ ಎಂದು ಕರೆದುಕೊಂಡರು. ಬೇರೆ ಸಮಾಜವಾದಿಗಳಿಗಿಂತ ತಾವೇ ಹೆಚ್ಚು ಸಮಾಜವಾದಿ ಎಂದು ಒತ್ತಿ ಹೇಳಿದರು. ಅಂಬೇಡ್ಕರ್ ತನ್ನನ್ನು ಸಮಾಜವಾದಿ ಎಂದು ಕರೆದುಕೊಳ್ಳದಿದ್ದರೂ ಬೇರೆಲ್ಲ ಸಮಾಜವಾದಿಗಳಿಗಿಂತ ಹೆಚ್ಚು ಸಮಾಜವಾದಿಯಾಗಿದ್ದರು.
ಇವರಿಬ್ಬರ ಪರಸ್ಪರ ನಿಲುವುಗಳನ್ನು, ವಿರೋಧಗಳನ್ನು, ಬೆಂಬಲಗಳನ್ನು, ಗೌರವಗಳನ್ನು ಅಧ್ಯಯನ ಮಾಡುವುದು; ಅವುಗಳ ಬಗ್ಗೆ ತುಲನಾತ್ಮಕವಾಗಿ ಬರೆಯುವುದು ಒಂದು ಅತ್ಯಂತ ರೋಚಕ ಕೆಲಸ - ಹಾಗೆಯೇ ಅತ್ಯಂತ ಕಷ್ಟಕರವೂ ಹೌದು. ಇಂತಹ ಒಂದು ಸಣ್ಣ ಪ್ರಯತ್ನ ಈ ಪುಸ್ತಕ.