Select Size
Quantity
Product Description
ನಮ್ಮ ಭಾವ ಪ್ರಪಂಚಕ್ಕೆ ಸೇರಿದ ಎಲ್ಲ ಸಂಗತಿಗಳೂ ರಿಲೆಟಿವ್. ಒಂದಕ್ಕೊಂದು ಹೆಣೆದುಕೊಂಡೇ ಬದುಕಿನ ಒಪ್ಪಂದವೊಂದು ತಯಾರಾಗುತ್ತದೆ. ಪೂರ್ಣಿಮಾರ ಕತೆಗಳಲ್ಲಿ ಈ ಬಗೆಯ ಅಪರೂಪವಾದುದೊಂದು ನೇಯ್ಗೆಯಿದೆ. ಒಂದು ಸೌಟು ಎಷ್ಟೆಲ್ಲ ರೂಪಕಗಳಿಗೆ ಕನ್ನಡಿಯಾಗಿ ಅಚ್ಚರಿಗೊಳಿಸುತ್ತದೆ. ಕಡೆಗೂ ಹೆಣ್ಣೊಬ್ಬಳ ಸಿದ್ಧಿಯಿರುವುದು ಅಡುಗೆ ಮನೆಯಲ್ಲಿಯೇ ಎಂಬ ಏಕರೂಪ ನೀತಿಯನ್ನು ಈ ಕತೆ ವಾಚ್ಯವಲ್ಲದ ರೀತಿಯಲ್ಲಿ ಸ್ಪಷ್ಟವಾಗಿ ಪ್ರಶ್ನಿಸುತ್ತದೆ. -ಕಾವ್ಯ ಕಡಮೆ
ಕತೆ ರಚಿಸಲಿಕ್ಕೆ ಅಂತ ಪಟ್ಟಾಗಿ ಕುಳಿತು ಬರೆಯುವವರು ಅಪರೂಪ. ಅದರಲ್ಲಿಯೂ ಹೊಸ ತಲೆಮಾರಿನವರು ಇಲ್ಲವೇ ಇಲ್ಲ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಪೂರ್ಣಿಮಾ, ಹೊಸ ಹೊಸ ಕಥಾವಸ್ತುಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗುತ್ತಾರೆ. ಇಲ್ಲಿನ ಮ್ಯಾಜಿಕ್ ಸೌಟು, ಕೇಳದೆ ನಿಮಗೀಗ, ಅದಲು-ಬದಲು 'ಇತರ ಕತೆಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಬಹುಶಃ ಕತೆಗಳನ್ನು ಉಸಿರಾಡುವುದೆಂದರೆ ಇದೇ ಇರಬೇಕು. -ಡಾ. ಅಜಿತ್ ಹರೀಶಿ
ಭ್ರಮೆ ಮತ್ತು ವಾಸ್ತವವನ್ನು ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ ಪೂರ್ಣಿಮಾ. ಮನುಷ್ಯ ಕಡೆಗೂ ತೀವ್ರವಾಗಿ, ಅಸಂಖ್ಯ ಪದರಗಳಿರುವ ವ್ಯಕ್ತಿತ್ವವಾಗಿ, ಸಾಕಷ್ಟು ಕೊರತೆಗಳಿರುವವನಾಗಿ, ಅಂಥ ಕೊರತೆಗಳನ್ನೂ ಮೀರಿ ಮ್ಯಾಜಿಕ್ ಸೃಷ್ಟಿಸುವವನಾಗುತ್ತಾನೆ. ವರ್ಗಗಳ ನಡುವಿನ ಸಣ್ಣ ಸಣ್ಣ ಅಂತರಗಳು, ನಂಬಿಕೆಯ ಸ್ತರಗಳು, ಭರವಸೆ, ಹುಸಿಕೊಸರು-ಎಲ್ಲವೂ ಇಲ್ಲಿ ಹದವಾಗಿ ಬೆಸೆದಿದೆ. ಕಲೆ ಮತ್ತೇನು, ವೆಥೆಗಳ ಕಳೆಯುವ ಭ್ರಮೆ. ಅದಕ್ಕೆ ಜೋತುಬಿದ್ದು ಬದುಕಿನ ಕಷ್ಟಗಳನ್ನು ದಾಟುತ್ತೇವೆ. -ವಿಕಾಸ್ ನೇಗಿಲೋಣಿ
ಆಧುನಿಕ ನೋಟ, ಆರ್ದ್ರ ಅಂತರಂಗದ ಚಿಲುಮೆ ಪೂರ್ಣಿಮಾ ಕತೆಗಳ ಶಕ್ತಿ. ಅವರು ಕತೆಗಳನ್ನು ಭಾವಿಸಿ ಬರೆಯುತ್ತಾರೆಂದು ನನ್ನ ನಂಬಿಕೆ. ಕತೆಯೊಳಗೆ ನಮ್ಮ ವ್ಯಕ್ತಿತ್ವದ ತುಣುಕೊಂದು ಸೇರಿಕೊಂಡಾಗ ಅದರ ಚಹರೆಯೇ ಬದಲಾಗುತ್ತದೆ. ಇಲ್ಲಿನ ಅನೇಕ ಕತೆಗಳಲ್ಲಿ ಅದಾಗಿದೆ. -ಜೋಗಿ
Binding
Soft Bound
Author
Poornima Malagimani
ISBN-13
9789393224767
Number of Pages
132
Publisher
Sawanna Enterprises
Publication Year
2024
Language
Kannada