Quantity
Product Description
ಈಜಿಪ್ಟ್ ಗೆ ಹೋಗಬೇಕು, ಪಿರಮಿಡ್ಡುಗಳನ್ನು ಕಾಣಬೇಕು ಎನ್ನುವುದು ಪ್ಲಾನ್ ಮಾಡಿ ಆದದ್ದಲ್ಲ. ಈಜಿಪ್ಟ್ ನನ್ನ ಪವಾಸದ 69ನೇ ದೇಶ. ಈಜಿಪ್ಟ್ ಅಂತಲ್ಲ, ಉಳಿದ 68 ದೇಶಗಳು ಕೂಡ ಪ್ಲಾನ್ ಮಾಡಿ ಆದದ್ದಲ್ಲ. ನಾನು ಯಾವತ್ತೂ, ಯಾವುದನ್ನೂ ಬಯಸಿದವನಲ್ಲ. ಬಯಸಿದ ಮಾತ್ರಕ್ಕೆ ಸಿಗುವ ಬದುಕು ನನ್ನದು ಆಗಿರಲಿಲ್ಲ. ಹಾಸಿ ಹೊದ್ದುಕೊಳ್ಳುವ ಬಡತನ ಅಡ್ಜಸ್ಟ್ ಮಾಡುವುದನ್ನು ಚೆನ್ನಾಗಿ ಕಲಿಸಿ ಬಿಟ್ಟಿತ್ತು. ಹೀಗಾಗಿ ಹಿಂದಿ ಭಾಷಿಕರು ಹೇಳುವಂತೆ `ಔಕಾತ್ ಮೇ ರಹೇ' ಎಂದು ಮನಸ್ಸಿಗೆ ಹೇಳಿಬಿಟ್ಟಿದ್ದೆ. ಅಟ್ಟಕ್ಕೆ ಏಣಿ ಹಾಕಬಹುದು, ಆಕಾಶಕ್ಕೆ ಏಣಿ ಹಾಕಿದರೆ ಹೇಗೆ? ಆಕಾಶಕ್ಕೆ ಏಣಿ ಹಾಕಲು ಸಾಧ್ಯವೇ? ಒಪ್ಪತ್ತಿನ ಊಟಕ್ಕೇ ತಡಕಾಡುವ ಸಮಯದಲ್ಲಿ ವಿದೇಶ ಪ್ರವಾಸದ ಕನಸು ಕಾಣುವುದು ಅಪರಾಧ, ಆಕಾಶಕ್ಕೆ ಏಣಿ ಹಾಕಿದಂತೆ ಎನ್ನುವುದು ಗೊತ್ತಾಗಿತ್ತು. ಹೀಗಾಗಿ ಪ್ರಾಕ್ಟಿಕಲ್ ಆಗಿರುವುದು ಕಲಿತು ಬಿಟ್ಟಿದ್ದೆ. ಈ ಎಲ್ಲಾ ಕಾರಣದಿಂದ ನಾನೊಬ್ಬ ಡೆಸ್ಟಿನಿ ಕಿಡ್. ಸ್ಲಂ ಹುಡುಗನೊಬ್ಬ ಗಾಡ್ ಫಾದರ್ಗಳಿಲ್ಲದೆ ಕೇವಲ ದೈವ ಅನುಗ್ರಹ ಮತ್ತು ಶ್ರಮದ ಫಲದಿಂದ 69 ದೇಶಗಳನ್ನು ಸುತ್ತಿದ ಎಂದು ಬಾಲಿವುಡ್ನವರು ಚಿತ್ರ ಮಾಡದ್ದಿರೆ, ಎಲ್ಲರಿಗಿಂತ ಮುಂಚೆ ಇವೆಲ್ಲಾ ರೀಲ್ ಎಂದು ನಕ್ಕಿರುತ್ತಿದ್ದೆ. ಯಾವ ಕೋನದಿಂದ ನೋಡಿದರೂ ಬೆಂಗಳೂರು ನಗರದಲ್ಲಿ ಸ್ವಂತ ಮನೆ ಕಟ್ಟುವುದು ದೂರದ ಮಾತು, ಮೂರು ಹೊತ್ತು ಅನ್ನಕ್ಕೆ ಅಡ್ಡಿಯಿಲ್ಲದ ಬದುಕು ಇವರು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ಬದುಕು ನನ್ನದಾಗಿತ್ತು. ಮುಂದಿನ ಹೊತ್ತಿನ ಊಟ ಗ್ಯಾರಂಟಿ ಇಲ್ಲದ ಬದುಕಿನಲ್ಲಿ ಇನ್ನೇನು ತಾನೇ ಪ್ಲಾನ್ ಮಾಡಲು ಸಾಧ್ಯ? ಹೀಗಾಗಿ ಈಜಿಪ್ಟ್ ಜೊತೆಗೆ ಯಾವುದೂ ಪ್ಲಾನ್ಡ್ ಅಲ್ಲ. ಬದುಕು ಕರೆದತ್ತ ಮುಖ ಮಾಡಿ ನಡೆಯುತ್ತಾ ಬಂದಿದ್ದೇನೆ.
Author
Rangaswamy Mookanahalli
ISBN-13
9788199544253
Number of Pages
108
Publisher
Seema Books
Publication Year
2026
Binding
Soft Bound
Length
22 CMS
Weight
100 GMS
Width
14 CMS
Height
1 CMS
Language
Kannada