Quantity
Product Description
ಬಂಜಗೆರೆ ಜಯಪ್ರಕಾಶ್ ತಮ್ಮ ಜೀವನ ದೃಷ್ಟಿ, ಬಂಡಾಯ ನೋಟ ಹಾಗೂ ತಾತ್ವಿಕತೆಗಳಿಗೆ ಹತ್ತಿರವಾಗಿರುವ ಈ ಕಾದಂಬರಿಯನ್ನು ಇಂಗ್ಲಿಷಿನಿಂದ ಅನುವಾದಿಸಿ, ಮೊದಲು 'ದೇಗುಲದಲ್ಲಿ ದೆವ್ವ' ಎಂದು ಹೆಸರಿಟ್ಟರು. ತನ್ನ ಕಾದಂಬರಿಗೆ ಹೆಸರಿಡುವಾಗ ಶಿಲುಬೆಯೇರಿದ ಏಸುವಿನ ಚಿರಪರಿಚಿತ ಚಿತ್ರದ ಅರ್ಥವನ್ನು ನೆನಪಿಸುತ್ತಾ, ಗೂಗಿ ಅದಕ್ಕೆ ತದ್ವಿರುದ್ಧವಾದ ವ್ಯಂಗ್ಯದ ಅರ್ಥ ಬರುವ 'ಡೆವಿಲ್ ಆನ್ ದ ಕ್ರಾಸ್' ಎಂಬ ಹೆಸರಿಟ್ಟಿದ್ದ. ಗೂಗಿಯ ಈ ಸೂಚನೆಗಳನ್ನು ಕನ್ನಡ ಹೆಸರು ಸಮರ್ಥವಾಗಿ ಬಿಂಬಿಸದೇ ಹೋದದ್ದರಿಂದ ಬಂಜಗೆರೆ ಮತ್ತೆ ಮೂಲ ಹೆಸರನ್ನೇ ಉಳಿಸಿಕೊಂಡರು. ಬಂಜಗೆರೆ ಹತ್ತಿರದಿಂದ ಕಂಡ ಭಾರತದ ಸಾಮುದಾಯಿಕ ಹೋರಾಟಗಳ ಲೋಕ ಆಫ್ರಿಕನ್ ಕಾದಂಬರಿಯಲ್ಲಿರುವ ಹೋರಾಟದ ಲೋಕದ ಜೊತೆಗೆ ಬೆರೆತು ಈ ಕನ್ನಡ ಕಾದಂಬರಿ ಈ ನೆಲದ ಅನುಭವಕ್ಕೆ ಹತ್ತಿರವಾದ ಕೃತಿಯಾಗಿದೆ. ಮೂಲ ಲೇಖಕನ ತಾತ್ವಿಕತೆಯೂ ಅನುವಾದಕನ ತಾತ್ವಿಕತೆಯೂ ಬೆರೆತಾಗ, ಬೆಸೆದಾಗ ಹುಟ್ಟುವ ಭಾಷಾಂತರದ ಒಳ್ಳೆಯ ಉದಾಹರಣೆಯಾಗಿ ಕೂಡ ಈ ಕಾದಂಬರಿ ನಮ್ಮ ಮುಂದಿದೆ. ಅದು ಇಂಡಿಯಾದಲ್ಲಿರುವ ವರಿಂಗಾಳಂಥ ನಾಯಕಿಯರ ಕತೆಯನ್ನೂ ಹೇಳುತ್ತದೆ. ಅನೇಕ ಆಫ್ರಿಕನ್ ಕಾದಂಬರಿಗಳ ಹೆಸರು, ಹಿನ್ನೆಲೆ ಬದಲಿಸಿದರೆ ಅವು ಕನ್ನಡದ ಕಾದಂಬರಿಗಳೇ ಆಗಬಲ್ಲವು ಎಂಬುದನ್ನು ನಾನು ಆಫ್ರಿಕನ್ ಕೃತಿಗಳನ್ನು ಓದುವಾಗ ಕಂಡುಕೊಂಡಿರುವೆ. ಈ ಕಾದಂಬರಿ ಕೂಡ ಆ ಸಾಲಿಗೇ ಸೇರುತ್ತದೆ. ಗೂಗಿ ವಾ ಥಿಯಾಂಗೋರ ಬದುಕು-ಬರಹಗಳು ಚಿಂತನೆಗಳು ಇವತ್ತಿಗೂ ಬರವಣಿಗೆಗಳಲ್ಲಿ ತೊಡಗುವವರಿಗೆ ಹಲವು ಪಾಠಗಳನ್ನು ಕಲಿಸಬಲ್ಲವು. ಗೆಳೆಯ ಬಂಜಗೆರೆ ಜಯಪ್ರಕಾಶ್ ಮಾಡಿರುವ ಗೂಗಿಯ ಕನ್ನಡೀಕರಣ ಆಫ್ರಿಕನ್ ಸಾಹಿತ್ಯದ ಜೊತೆಗಿನ ಕನ್ನಡದ ನಂಟನ್ನು ಇನ್ನಷ್ಟು ಗಾಢವಾಗಿಸುವ ಹಾದಿಗಳನ್ನು ತೆರೆಯಬಲ್ಲದು. ನಟರಾಜ್ ಹುಳಿಯಾರ್
Author
Ngugi wa Thiong'o and Banjagere Jayaprakasha
Binding
Soft Bound
ISBN-13
9788197219450
Number of Pages
308
Publication Year
2025
Publisher
Srushti Publications
Height
2 CMS
Length
22 CMS
Weight
500 GMS
Width
14 CMS
Language
Kannada