Product Description
ಕ್ರಾಂತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಇಪ್ಪತ್ತೆರಡು ಜನರ ಬದುಕಿನ ತುಣುಕು ಚಿತ್ರಗಳ ಸಂಗ್ರಹ ಇದು. ಬದುಕಿಗೆ ಸವಾಲಾಗಿದ್ದ, ಅಷ್ಟೇ ಅಪಾಯಕಾರಿಯೂ ಆಗಿದ್ದ ಕಾಲಘಟ್ಟದಲ್ಲಿ ಜೀವಿಸಿದ್ದ ಅವರು ಪ್ರವಾಹಕ್ಕೆದುರು ಈಜಿದವರು. ಅವರು ಬದುಕಿನ ವಿವಿಧ ಕ್ಷೇತ್ರಗಳಿಂದ ಬಂದವರು. ಮಾನವೀಯ ತುಡಿತವುಳ್ಳ ಅವರು ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಪಣಕ್ಕಿಟ್ಟು ಹೋರಾಡಿದವರು. ನಮ್ಮ ಬದುಕು ಹಸನಾಗಬೇಕೆಂದು ಅವರು ಸಾವಿನೊಂದಿಗೆ ಸೆಣಸಿದರು, ನಾವು ನಗೆಬೇಕೆಂದು ಅವರು ದುಃಖವನ್ನು ನುಂಗಿಕೊಂಡರು. ಸುತ್ತಲೂ ಬೆಳಕು ಚೆಲ್ಲುವುದಕ್ಕಾಗಿ ತಮ್ಮನ್ನು ದಹಿಸಿಕೊಂಡ ಈ ಪಂಜುಗಳನ್ನು ರಚಿಸಿದವರು ಸು. ರಂ. ಎಕ್ಕುಂಡಿ ಅವರು. ಕವಿ ಹೃದಯದ ಕಳಕಳಿಯಿಂದ, ಇತರರಿಗೆ ಸ್ಫೂರ್ತಿಯಾಗುವಂತೆ ಇವನ್ನು ರಚಿಸಿದ್ದಾರೆ. ಈ ಸಂಹ್ರಹದ ಸಂಪಾದನೆಗೆ ಶ್ರೀ ರಂಜಾನ್ ದರ್ಗಾ ಹಾಗೂ ಶ್ರೀ ಸಿ. ವಿ. ಆನಂದ ಸಹಕರಿಸಿದ್ದಾರೆ.