Quantity
Product Description
ಮ್ಯಾಜಿಕ್ ಅಥವಾ ಜಾದೂ ವಿದ್ಯೆ ಯಾರನ್ನು ಆಕರ್ಷಿಸುವುದಿಲ್ಲ ಹೇಳಿ ?
ಯಾವುದೋ ಒಂದು ಗುಟ್ಟನ್ನು ತನ್ನೊಡಲಲ್ಲಿಟ್ಟುಕೊಂಡು ಜಾದೂಗಾರ ಆಡುವ ಆಟಗಳಿಗೆ ಲೆಕ್ಕವಿದೆಯೆ? ಅವನ್ನೆಲ್ಲಾ ಕಣ್-ಬಾಯಿ ಬಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿರುವ ನಮಗೆ ಅದನ್ನು ಕಲಿಯಬೇಕು - ತಾನೂ ಮಾಡಬೇಕೆಂಬ ಹಂಬಲ ಮೂಡುವುದು ಸಹಜ. ಹಿಂದಿನಿಂದಲೂ ಮಾಯಾ ಮಂತ್ರ ಕಟ್ಟು ವಿದ್ಯೆ - ಇಂದ್ರಜಾಲ - ಮಹೇಂದ್ರಜಾಲ ಮುಂತಾಗಿ ಸುದ್ದಿಯಲ್ಲಿದ್ದ ಈ ವಿದ್ಯೆ ಖಂಡಿತ ಪವಾಡವಂತೂ ಅಲ್ಲವೇ ಅಲ್ಲ. ಇದಕ್ಕೆ ಬೇಕಿರುವ ಬಂಡವಾಳವೆಂದರೆ ಕೇವಲ ಚಮತ್ಕಾರ ಮತ್ತು ಕೈಚಳಕ. ಅದೋ ಪಿ.ಸಿ, ಸರ್ಕಾರ್ ಬರುತ್ತಿದ್ದಾರೆ. - ರೈಲನ್ನೇ ಮಾಯ ಮಾಡಿದ ಜಾದೂಗಾರನೀತ ! ಪುಸ್ತಕವನ್ನೇ ಮಾಯ ಮಾಡಿಬಿಟ್ಟರು. ಅದಕ್ಕಿಂತ ಮುಂಚೆ ಇಲ್ಲಿನ ಜಾದೂ ತಂತ್ರಗಳನ್ನೆಲ್ಲ ಕಲಿಯೋಣ. ಆದರೆ ಜೋಕೆ ! ನೀವು ಕಲಿತು ಮಾಡುವ ಮ್ಯಾಜಿಕ್ ನಿರಪಾಯಕಾರಿಯಾಗಿರಲಿ, ಖುಷಿ ಕೊಡಲಿ.
ಕೃತಿ ರಚನೆ ಮಾಡಿದ ಶ್ರೀ ಜಿ.ವಿ. ಗಣೇಶಯ್ಯ ಮೂಲತಃ ಶೃಂಗೇರಿ ಸಮೀಪದ ಒಂದು ಹಳ್ಳಿಯವರು. ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರು. ಇವರ ಹಲವು ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
Binding
Soft Bound
Author
Dr K N Ganeshaiah
Number of Pages
50
Publisher
Nava Karnataka Publications Pvt Ltd
Publication Year
2020
Height
1 CMS
Length
22 CMS
Weight
100 GMS
Width
14 CMS
Language
Kannada