Product Description
ಆದಿಕಾವ್ಯವೆಂದು ಪರಿಗಣಿತವಾಗಿರುವ ರಾಮಾಯಣವನ್ನು ಸಂಕಾಲಿಯಾ ಅವರು ಇಲ್ಲಿ ಉನ್ನತ ವಿಮರ್ಶೆಗೆ ಒಳಪಡಿಸಿದ್ದಾರೆ. ರಾಮಾಯಣದ ಪ್ರತಿ ಕಾಂಡವನ್ನೂ ಪುರಾತತ್ವ, ಶಾಸ್ತ್ರೀಯ, ಐತಿಹಾಸಿಕ, ಸಾಹಿತ್ಯಕ ಹಾಗೂ ಭಾಷಿಕ ವಿಧಾನಗಳಿಂದ ಪರಿಶೀಲಿಸಿದ್ದಾರೆ. ಐತಿಹಾಸಿಕ ಘಟನೆಗಳನ್ನು ಕುರುಹುಗಳು ಹಾಗೂ ಶಾಸನಗಳ ಆಧಾರಗಳಿಂದ ಸೂಕ್ಷ್ಮವಾಗಿ ವಿಮರ್ಶಿಸಿದ್ದಾರೆ. ರಾಮಾಯಣವು ಕ್ರಿ.ಶ. ೫-೬ನೇ ಶತಮಾನಕ್ಕಿಂತ ಹಿಂದಿನದಲ್ಲ. ಕಿಷ್ಕಿಂಧಾ, ಸುಂದರ ಹಾಗೂ ಯುದ್ಧಕಾಂಡಗಳನ್ನು ಈ ಮಹಾಕಾವ್ಯಕ್ಕೆ ಅನಂತರ ಸೇರಿಸಲಾಯಿತೆಂದು ಲೇಖಕರು ಆಧಾರ ಸಹಿತ ವಾದಿಸುತ್ತಾರೆ. ರಾಮಾಯಣವು ನಿಶ್ಚಿತವಾದ ಐತಿಹಾಸಿಕ ಸನ್ನಿವೇಶದ ಕೂಸು. ಲಂಕೆಯ ಕುರಿತಾದ ವರ್ಣನೆಗಳು ಕ್ರಿ.ಶ. ೧-೨ನೇ ಶತಮಾನದ ಇಂಡೋರೋಮನ್ ನಗರದ ಮಾದರಿಯನ್ನು ಅನುಸರಿಸಿ ರೂಪು ತಳೆದ ವರ್ಣನೆಗಳು. ಎಲ್ಲಕ್ಕೂ ಮಿಗಿಲಾಗಿ, ರಾಮನು ವಾನರ ಸೇನೆಯೊಂದಿಗೆ ವಿಂಧ್ಯವನ್ನಾಗಲಿ, ನರ್ಮದೆಯನ್ನಾಗಲಿ ದಾಟಲಿಲ್ಲ. ಕ್ರಿ.ಶ. ನಾಲ್ಕನೆಯ ಶತಮಾನದ ನಂತರವೇ ರಾಮನನ್ನು ದೈವತ್ವಕ್ಕೆ ಏರಿಸುವ ಪ್ರಯತ್ನ ಆರಂಭವಾಯಿತು. ಮೂಲ ಲಂಕೆಯು ಹಿಂದೂ ಸಾಗರದಲ್ಲಿರುವ ದ್ವೀಪವಲ್ಲ. ಅದು ಮಧ್ಯಪ್ರದೇಶದ ಪೂರ್ವ ಭಾಗದಲ್ಲಿದೆ. ರಾವಣನನ್ನು ತಮ್ಮ ಹಾಡುಗಳಲ್ಲಿ ಹೊಗಳುವ ಅವನ ವಂಶದವರಾದ ಆದಿವಾಸಿ ಗೊಂಡರು ಇಲ್ಲಿ ವಾಸವಾಗಿದ್ದಾರೆ ಎಂದು ಶಾಸನಗಳ ಆಧಾರ, ಕಾವ್ಯದ ಆಂತರಿಕ ಸಾಕ್ಷ್ಯಗಳು, ಭೌಗೋಳಿಕ ಹಾಗೂ ಜನಾಂಗೀಯ ಅಧ್ಯಯನದ ಆಧಾರಗಳ ಬೆಳಕಿನಲ್ಲಿ ಸಾಧಿಸಿ ತೋರಿಸುತ್ತಾರೆ.