Quantity
Product Description
ಪುಸ್ತಕದ ಬಗ್ಗೆ : ಶಾಕ್ಯಶಕ್ತ ಶಿಲ್ಪ : ರೋಚಕ ಕಾದಂಬರಿ ಹದಿನಾರನೇ ಶತಮಾನದ ಪೋರ್ಚುಗೀಸ್ ಯುದ್ಧಪರಿಣಿತನ ಬಗ್ಗೆ ಇತ್ತೀಚೆಗೆ ರಚಿಸಲಾಗಿರುವ ಒಂದು ಪ್ರಸಿದ್ದ ಪ್ರೇಮಗೀತೆಯ ಸತ್ಯಾಸತ್ಯತೆಯನ್ನು ಸಂಶೋಧಿಸಲೆಂದು, ಆ ದೇಶದ ಸ್ನಾತಕೋತ್ತರ ವಿಧ್ಯಾರ್ಥಿನಿ, ಮೀರಾ ಮೈಯನ್ಮಾರ್ಗೆ ಬಂದಾಗ ಅಪರಿಚಿತ ಗುಂಪೊಂದು ಆಕೆಯನ್ನು ಅಪಹರಿಸುತ್ತದೆ. ಪಲ್ಲವರ ರಾಜನಿಗೆ ಕಾಂಬೋಡಿಯದ ಖೈರ್ ಸಾಮ್ರಾಜ್ಯದ ರಾಜನೊಬ್ಬ ಕೊಡುಗೆಯಾಗಿ ಕಳುಹಿಸಿದ್ದ ಬಂಗಾರದ ರಥದ ಮೇಲೆ ಅಂತರಾಷ್ಟ್ರೀಯ ಕಳ್ಳರ ಗಮನ ಹರಿದಿರುವ ಸುದ್ದಿಯ ಹಿನ್ನೆಲೆಯಲ್ಲಿ ಭಾರತದ ಸರಕಾರ ಪೂಜಾಳನ್ನು ಒಂದು ರಹಸ್ಯ ಕಾರ್ಯಾಚರಣೆಗೆಂದು ಆಗ್ನೇಯ ಏಷ್ಯ ದೇಶಗಳಿಗೆ ಕಳುಹಿಸಲು ಅನುವಾಗುತ್ತದೆ. ಅಷ್ಟರಲ್ಲಿ ಕಾಂಬೋಡಿಯಾದ ಕಾಡಿನಲ್ಲಿದ್ದ ಒಂದು ಪಗೋಡದಲ್ಲಿ ಹಲವು ಬೌದ್ಧಬಿಕ್ಕುಗಳ ಮಾರಣಹೋಮ ನಡೆದಿರುವ ಸುದ್ದಿ ಭಾರತದ ವಿದೇಶಾಂಗ ಖಚೇರಿಗೆ ತಲುಪುತ್ತದೆ. ಪರಿಣಾಮವಾಗಿ ಪೂಜಾಳ ಶೋಧದ ದಿಕ್ಕೇ ಬದಲಾಗುತ್ತದೆ. ಆ ಎಲ್ಲಾ ಘಟನೆಗಳೂ ಭಾರತದಿಂದ ಪಯಣಿಸಿದ್ದ ಬುದ್ಧನ ಅಭೂತಪೂರ್ವ ಶಿಲ್ಪವೊಂದರ ಚರಿತ್ರೆಯ ಸುತ್ತ ಬೆಸೆದುಕೊಂಡಿರುವ ಸತ್ಯ ತೆರೆದುಕೊಂಡಂತೆ ಪೂಜಾ ಮತ್ತು ಮೀರಾ ಒಟ್ಟಾಗಿ ಅದರ ರಹಸ್ಯವನ್ನು ಬೇದಿಸತೊಡಗುತ್ತಾರೆ. ಆ ಹುಡುಕಾಟಗಳ ಮೂಲಕ ಭಾರತೀಯತೆಯ ಜಾಗತಿಕ ಪಯಣದ ಅದ್ಭುತ ಚರಿತ್ರೆ ಅನಾವರಣಗೊಳ್ಳುತ್ತದೆ.
Height
2 CMS
Weight
300 GMS
Width
14 CMS
Length
22 CMS
ISBN-13
9789348262820
Number of Pages
384
Publisher
Ankitha Pusthaka
Author
Dr K N Ganeshaiah
Binding
Soft Bound
Publication Year
2025
Language
Kannada