Quantity
Product Description
Geddavara Kathegalu | Kannada | Raju Adakalli
ಪತ್ರಕರ್ತ ರಾಜು ಆಡಕಳ್ಳಿ ನಮ್ಮ 'ಲೋಕಧ್ವನಿ' ದೈನಿಕ ಪತ್ರಿಕೆಯಲ್ಲಿ ಬರೆಯುತ್ತಿರುವ ವ್ಯಕ್ತಿ-ಶಕ್ತಿ' ಅಂಕಣ ಬರಹಗಳ ಪುಸ್ತಕವೇ 'ಗೆದ್ದವರ ಕಥೆಗಳು, ಈಗಾಗಲೇ ವ್ಯಕ್ತಿ-ಶಕ್ತಿ, ಹೊಸಮುಖ, ಸ್ಫೂರ್ತಿವಂತರು ಈ ಸರಣಿಯ ಕೃತಿಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತರು, ಸಾಧಕರು ರಾಜ್ಯ-ದೇಶ, ವಿಶ್ವಮಟ್ಟದಲ್ಲಿ ಮಾದರಿಯಾಗಿ ನಿಂತ ವ್ಯಕ್ತಿಚಿತ್ರಣಗಳು ಇಲ್ಲಿವೆ. ವ್ಯಕ್ತಿ ಮೀರಿದ ಶಕ್ತಿಯಾಗಿರುವ ಸ್ವರ್ಣವಲ್ಲಿ ಶ್ರೀಗಳಿಂದ ಹಿಡಿದು ನೌಕಾಪಡೆಯಲ್ಲೇ ಬಾಳನೌಕೆ ಸಾಗಿಸಿದ ನಿಖಿಲ್ ತನಕ ಮೂವತ್ನಾಲ್ಕು ಜನರ 'ಗೆದ್ದವರ ಕಥೆಗಳು' ಇಲ್ಲಿ ಹರಳುಗಟ್ಟಿವೆ. ಅಡಕಳ್ಳಿ ಇಂಥ ಸಾಧಕರ ವ್ಯಕ್ತಿತ್ವ ಕಟ್ಟಿಕೊಡುವ, ಸರಳ ಭಾಷಾ ಶೈಲಿಯ ನಿರೂಪಣಾ ವಿಧಾನ ಓದುಗರನ್ನು ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಪ್ರತಿಯೊಬ್ಬರ ಬಾಳ ಕಥನಗಳಲ್ಲೂ ಒಂದೊಂದು ಸ್ಫೂರ್ತಿದಾಯಕ ಅಂಶಗಳಿವೆ. ಜೀವನದ ಏರಿಳಿತಗಳಲ್ಲೂ ಬದುಕನ್ನು ಹಸನು ಮಾಡಿಕೊಂಡ 'ಗೆದ್ದವರ ಕಥೆಗಳು' ಓದುಗರ ಮನಸೆಳೆಯುವುದರಲ್ಲಿ ಸಂಶಯವೇ ಇಲ್ಲ. ಕಲೆ, ಸಾಹಿತ್ಯ, ಯಕ್ಷಗಾನ, ವೈದ್ಯಕೀಯ, ಕೃಷಿ ಹೀಗೆ ಎಲ್ಲ ಕ್ಷೇತ್ರದ ವ್ಯಕ್ತಿಗಳು ಈ ಕೃತಿಯಲ್ಲಿ ಸಿಗುತ್ತಾರೆ. ಇವರೆಲ್ಲ ಬಹುತೇಕ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವುದು ಸಾಧನೆ ಮಾಡುವವರಿಗೆ ಮಾರ್ಗದರ್ಶಕರಾಗಿಯೂ ನಿಲ್ಲುತ್ತಾರೆ. ಅಡಕಳ್ಳಿಯವರು ಈ ಒಂದು ಕೃತಿಯಲ್ಲಿ ಇಷ್ಟು ಜನರನ್ನು ಸೇರಿಸಿರುವುದು ಒಂದು ರೀತಿಯಲ್ಲಿ ಸಾಧಕರ ಸಮಾವೇಶವೇ?
Author
Raju Adakalli
Binding
Soft Bound
ISBN-13
9788197984778
Number of Pages
200
Publication Year
2025
Publisher
Vishwavani Pusthaka
Height
2 CMS
Length
22 CMS
Weight
200 GMS
Width
14 CMS
Language
Kannada