Select Size
Quantity
Product Description
ಕತೆಗಳ ಕುಸುರಿಗೆ ಇಳಿದಿರುವ ಪ್ರಬಂಧಗಳ ಲೇಖಕಿ ನಳಿನಿ ಭೀಮಪ್ಪ ಕತೆಗಳಿಗೆ ತೆರೆದುಕೊಂಡದ್ದು ಎಷ್ಟು ಅಚ್ಚರಿಯೋ, ಸರಾಗವಾಗಿ ಕತೆಗಳ ಮೂಲಕ ಓದುಗ ಲೋಕವನ್ನು ಅಚ್ಚರಿಗೆ ದೂಡಿದ್ದೂ ಅಷ್ಟೇ ಸೋಜಿಗ, ಭಾಷೆಯೊಂದಿಗೆ ಲೀಲಾಜಾಲವಾಗಿ ಸದರ ತೆಗೆದುಕೊಳ್ಳುವ, ಕತೆಗಳನ್ನು ಸರಸರನೆ ಓಡಿಸುವ, ಅಚ್ಚರಿಗೆ ತಳ್ಳುವ ಕಥಾ ತಂತ್ರಗಾರಿಕೆ ವಶವಾಗಿದ್ದು ಎದ್ದು ಕಾಣುತ್ತದೆ. ಹಲವು ನಿಲುವಿನ, ಅಚ್ಚರಿಗಳ ತಿರುವಿನ, ಅಲ್ಲಲ್ಲಿ ಹೀಗೇ ಎನ್ನಿಸುವ ಭಾವಕ್ಕೆ ತಳ್ಳುತ್ತಾ ಓದುಗರನ್ನು ಹಿಡಿದಿಡುವ ಕತೆಗಳು ಇಲ್ಲಿನ ವಿಶೇಷ. ಸಾಂಪ್ರದಾಯಿಕ ಕತೆಗಳ ಜಾಡಿನಲ್ಲೇ ಕತೆ ಬರೆಯುವ ಬರಹಗಾರ್ತಿ ತಾಂತ್ರಿಕತೆಯಲ್ಲಿ ಹೊಸತನಕ್ಕೆ ಪ್ರಯತ್ನಿಸಿದ್ದು ಆಪ್ತವಾಗುತ್ತದೆ. ಆದರೆ ಅನಿರೀಕ್ಷಿತ ತಿರುವುಗಳ ಕಾರಣಕ್ಕೆ ಪಕ್ಕಾಗಿ, ಸಂಭಾವ್ಯ ಘಟನೆಗಳನ್ನು ಮೀರಿದ ರೋಚಕತೆಯಿಂದ, ವಾಸ್ತವದಾಚೆಗೆ ಸರಿಯುವ ಶೈಲಿ ಸಹಜ ಓಟಕ್ಕೆ ತಡೆಯೂ ಆಗಿದ್ದಿದೆ. ಆಯಾ ಪ್ರದೇಶವಾರು, ಕೆಲವೊಮ್ಮೆ ವ್ಯಕ್ತಿಗತ ಎನ್ನಿಸುವ ವಿಷಯದಲ್ಲಿ ಕಥೆಯ ಕ್ಯಾನ್ವಾಸ್ ಹಿಗ್ಗಿಸಿರುವುದು, ಹೆಣ್ಣು, ಸಮಾಜ, ಸಹ್ಯವಾಗದ ಆದರೆ ಜೀರ್ಣಿಸಿಕೊಳ್ಳಬೇಕಾದ ಅನಿವಾರ್ಯತೆಯ ಕಥಾವಸ್ತುಗಳನ್ನೆಲ್ಲ ಲೀಲಾಜಾಲವಾಗಿ ಬಳಸಿ, ಕತೆ ದಕ್ಕುವಂತೆ ಮಾಡುವ ಕಲೆ ಮತ್ತು ವ್ಯಾಪ್ತಿಗಳು ಇಲ್ಲಿನ ವಿಶೇಷ. ಕತೆಗೆ ಪೂರಕ ಭಾಷೆ ಮತ್ತು ಶೈಲಿ ಜೊತೆಗೆ ಹೊಸಹೊಸ ತಂತ್ರಗಾರಿಕೆಯ ಹಿಡಿತ ದಕ್ಕಿಸಿಕೊಂಡಿರುವ ಲೇಖಕಿ ಕತೆಗಳನ್ನು ಓದಿಸುತ್ತಲೇ, ಸಾಹಿತ್ಯದ ಸಿದ್ಧ ಸೂತ್ರದ ಹಂಗಿಲ್ಲದೆ ಬಿಡುಬೀಸಾಗಿ ಬರೆಯುತ್ತಾ, ಆಯಾ ದೃಶ್ಯಭಾಷೆಗೆ ನಮ್ಮನ್ನು ತಳ್ಳುವುದರಿಂದ ವಿಭಿನ್ನವಾಗುತ್ತಾರೆ. ಕತೆಯಲ್ಲಿ ಒಳಗೊಳಿಸುವಿಕೆ ಮತ್ತು ಪಾತ್ರಗಳಲ್ಲಿ ಓದುಗನನ್ನು ಅಯಾಚಿತವಾಗಿ ಪ್ರವೇಶಿಸುವಂತೆ ಮಾಡುವ, ಪ್ರೇರೇಪಿಸುವ ಚಿತ್ರಣಗಳನ್ನು ಇನ್ನಷ್ಟು ಗಾಢವಾಗಿಸುತ್ತಾ, ಇನ್ನಷ್ಟು ಹೊಸ ಹೊಳವಿನ ಕತೆಗಳನ್ನು ನೀಡಿ, ಓದುಗರನ್ನು ಅಚ್ಚರಿಗೀಡು ಮಾಡಲಿ ಎಂದು ಹಾರೈಸುತ್ತಾ,
-ಸಂತೋಷಕುಮಾರ ಮೆಹೆಂದಳೆ
ಕಾದಂಬರಿಕಾರರು ಮತ್ತು ಅಂಕಣಕಾರರು
Weight
300 GMS
Length
22 CMS
Author
Nalini T Bheemappa
Publisher
Saahitya Loka Publications
Publication Year
2024
Number of Pages
144
Binding
Soft Bound
Language
Kannada