Select Size
Quantity
Product Description
'ಧಮ್ಮ ಕುರಿತ ಈ ದಾಖಲೆಯು ರಾಜ ದೇವನಾಂಪ್ರಿಯನಿಂದ ರೂಪಿಸಲ್ಪಟ್ಟಿದ್ದು ಸ್ವಲ್ಪ, ಭಾಗಶಃ ಅಥವಾ ಪೂರ್ಣ ಪೂರ್ಣ ಎಲ್ಲ ಕಡೆಗೂ ಸೂಕ್ತವಲ್ಲ
(ನನ್ನ) ರಾಜ್ಯ ವಿಸ್ತಾರ ಹಿರಿದು, ಬಹಳ ಬರೆಸಿ ಆಗಿದೆ, ಬರೆಸಬೇಕಾದದ್ದು ಇನ್ನೂ (ಬಹಳ) ಇದೆ.
(ಕೆಲ) ವಿಷಯಗಳನ್ನು ಅವುಗಳ ಹೊಸತನಕ್ಕಾಗಿ ಮತ್ತೆಮತ್ತೆ ಹೇಳಿದ್ದೇನೆ, ಜನ ಹಾಗೆಯೇ ನಡೆಯಲಿ ಎಂದು.
ಆದರೂ ಕೆಲವು (ವಿಷಯ) ಅರ್ಧಂಬರ್ಧವಾಗಿರಬಹುದು - ಸ್ಥಳದ ಕಾರಣದಿಂದ ಅಥವಾ (ನನ್ನ) ಆಶಯ ಬರೆದವರಿಗೆ ಇಷ್ಟವಾಗದೆ, ಅರ್ಥವಾಗದೆ ಹೋಗಿರುವುದರಿಂದ.
ರಾಜ ಪ್ರಿಯದರ್ಶಿ, ದೇವನಾಂಪ್ರಿಯ, ಸರ್ವಧರ್ಮಿಗಳ ಗೌರವಿಸುವವ ಗೃಹಸ್ಥ, ಸಾಧುಸಂತರೆನದೆ) ಎಲ್ಲರ ಗೌರವಿಸಿ, ಮನ್ನಣೆ ಕೊಡುವವ ತನಗೆ ಗೌರವ, ಮನ್ನಣೆ ಸಿಗುವುದಕ್ಕಿಂತ ಸರ್ವ ಮತಾನುಯಾಯಿಗಳಲ್ಲಿ ಧರ್ಮ ನೆಲೆಯಾಗಬೇಕೆಂದು ಬಯಸುತ್ತಾನೆ ಧರ್ಮಪಾಲನೆ ಸಾಧ್ಯವಾಗುವುದು (ತಮ್ಮ) ಮಾತಿನ ಮೇಲೆ ನಿಯಂತ್ರಣವಿಟ್ಟುಕೊಂಡು ತನ್ನ ಮತವನ್ನು ಹೊಗಳಿಕೊಳ್ಳದೆ ಇತರ ಮತಗಳನ್ನು ದ್ವೇಷಿಸದೆ ಇರುವುದರಿಂದ. ಪ್ರತಿ ಸಂದರ್ಭದಲ್ಲೂ ಅತಿಗೆ ಹೋಗದ ಮಧ್ಯಮ ಮಾರ್ಗಗಾಮಿಯಾಗಿರಬೇಕು.
ಹೀಗೆ ನಡೆದುಕೊಳ್ಳುವವರು ತನ್ನ ಮತಕ್ಕೂ ಪ್ರಯೋಜನಕಾರಿ, ಅನ್ಯಮತಗಳಿಗೂ ಹಿತಕಾರಿ.
ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಸ್ವಮತಕ್ಕೆ ಅತ್ಯಂತ ಅಪಾಯಕಾರಿ ಅಷ್ಟೇ ಅಲ್ಲ, ಅನ್ಯಮತಗಳಿಗೂ ಹಾನಿಕಾರಕ ಆಗುತ್ತಾರೆ.
ಅಂತಹ ನಡವಳಿಕೆಯನ್ನು ಸ್ವಮತ ಪ್ರೇಮದ ಭಕ್ತಿಯಿಂದ ಅಥವಾ ಸ್ವಮತದ ವೈಭವೀಕರಣದಿಂದ ಪ್ರದರ್ಶಿಸಿದಲ್ಲಿ ಅದರಿಂದ ತಮ್ಮ ಮತವನ್ನೇ ಆಳವಾಗಿ ಘಾಸಿಗೊಳಿಸುತ್ತಾರೆ ಆದ್ದರಿಂದ ಮೈತ್ರಿಯೊಂದೇ ಉನ್ನತ ಮೌಲ್ಯ.
ಎಂದರೆ ಎಲ್ಲರೂ ಪರಸ್ಪರರ ನೀತಿಯನ್ನು ಅಲಿಸಬೇಕು, ಪಾಲಿಸಬೇಕು. ಇದು ದೇವನಾಂಪ್ರಿಯನ ಬಯಕೆ'
Binding
Soft Bound
Author
H S Anupama
Number of Pages
100
Publisher
Ladai Prakashana
Publication Year
2026
Length
22 CMS
Weight
200 GMS
Width
14 CMS
Height
2 CMS
Language
Kannada