Product Description
“ಬೇಂದ್ರೆ ಅಂದ್ರೆ” ಕೃತಿಯು ಜ್ಞಾನಪೀಠ ಪುರಸ್ಕೃತ ‘ವರಕವಿ’ ಎಂದೇ ಗುರುತಿಸಲ್ಪಟ್ಟ ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮ ಹೊತ್ತ, ದ.ರಾ.ಬೇಂದ್ರೆಯವರ ಸಾಹಿತ್ಯ ಮತ್ತು ಜೀವನದ ವಿರಾಟ್ ದರ್ಶನವನ್ನು ಪರಿಚಯಿಸುವ ಕೃತಿ. ಬಹುಮುಖ ಪ್ರತಿಭೆಯ ಕವಿ, ದಾರ್ಶನಿಕನನ್ನು ಒಂದು ಲೇಖನ/ಕೃತಿಯಲ್ಲಿ ದಾಖಲೀಕರಿಸುವುದು ಸುಲಭದ ಕಾರ್ಯವಲ್ಲ. ಆದರೆ ಅವರ ಸಾಹಿತ್ಯದ ವಿರಾಟ್ ಸ್ವರೂಪವನ್ನು ಅರಿಯುವ ಪುಟ್ಟ ಪ್ರಯತ್ನ ಇದು. ಅಮೆರಿಕದ ಕನ್ನಡಿಗರು ಬೇಂದ್ರೆಯವರ ಸಾಹಿತ್ಯವನ್ನು ಕಂಡಂತೆ ಬರೆದ ೧೩ ಲೇಖನಗಳಿವೆ. ಕೆಲವು ಲೇಖನಗಳಲ್ಲಿ ವಿಷಯ ಪುನರಾವೃತ್ತಿಯಾಗಿದೆ ಎಂದು ಕಂಡುಬಂದರೂ ಅವುಗಳೆಲ್ಲವೂ ಲೇಖಕರ ಪ್ರಾಮಾಣಿಕ ಬೇರೆ-ಬೇರೆ ಅನಿಸಿಕೆಗಳು ಮತ್ತು ಸಾಂದರ್ಭಿಕವಾದವು. ಈ ಅಭಿಪ್ರಾಯಗಳು ಲೇಖಕರವೇ ಹೊರತು ಸಂಪಾದಕರದ್ದಲ್ಲ. ಅಮೆರಿಕನ್ನಡಿಗರ ಲೇಖನಗಳಿಗೆ ಪೂರಕವಾಗುವಂತೆ, ಕರ್ನಾಟಕದ ಸಾಹಿತಿಗಳ ಲೇಖನಗಳನ್ನೂ ಇಲ್ಲಿ ಸೇರಿಸಿಲಾಗಿದೆ. ಇದು ಈ ಕೃತಿಗೆ ಭಿನ್ನ ಆಯಾಮ ನೀಡಿರುವುದಲ್ಲದೆ, ಕರ್ನಾಟಕ-ಅಮೆರಿಕಗಳೊಳಗೆ ಸಾಹಿತ್ಯಿಕ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುತ್ತದೆ.