Quantity
Product Description
'ವೃಂದಾವನ', ರಾವಬಹಾದ್ದೂರ ಅವರ ಮತ್ತೊಂದು ಬೃಹತ್ ಕಾದಂಬರಿ. ಹೆಸರೇ ಸೂಚಿಸುವಂತೆ ಸ್ಥಾಪಿತ ವೃಂದಾವನದ ಸುತ್ತಲೇ ಕಥೆ ಸುತ್ತುತ್ತದೆ. ಇದೊಂದು ಕೇವಲ ಭಕ್ತಿಪ್ರಧಾನ ಕೃತಿಯಾಗುವ ಎಲ್ಲ ಸಾಧ್ಯತೆಗಳಿದ್ದರೂ ಇಲ್ಲಿ ಹಾಗಾಗಿಲ್ಲ. ಕಾದಂಬರಿ ಬೇರೆಯದೇ ಆಯಾಮ ಪಡೆದುಕೊಂಡಿದೆ. ಕಾದಂಬರಿಯ ಗತಿ ನಿಧಾನ ಎನ್ನಿಸಿದರೂ ಘಟನೆಗಳು ಮಾತ್ರ ವೇಗದಲ್ಲಿ ಚಲಿಸುತ್ತವೆ. ವೃಂದಾವನದ ಜೊತೆ ರಾಯರ ಮನೆತನದ ಕಥೆಯನ್ನು ಹೇಳುತ್ತಲೇ ಇಡೀ ಬಯಲು ಸೀಮೆಯ ಬದುಕನ್ನು ರಾವಬಹಾದ್ದೂರರು ಬಿಚ್ಚಿಡುತ್ತಾರೆ. ನದಿ ದಂಡೆಯ ಊರಾದರೂ ನಾನಾ ಕಾರಣಗಳಿಗಾಗಿ ಬೆಳೆಯಿಲ್ಲದ ರೈತರ ಬವಣೆಗಳು ಮನಸ್ಸಿಗೆ ನಾಟುವಂತೆ ಇಲ್ಲಿ ಚಿತ್ರಿತವಾಗಿವೆ.
ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಮತ್ತು ಸಮಾಜ ಜೀವನದಲ್ಲಿ ಬದಲಾಗುತ್ತಿರುವ ಮೌಲ್ಯಗಳ ನೈತಿಕ ಅಧಃಪತನದ ಚಿತ್ರಣ ಹಾಗೂ ಉಳ್ಳವರದೇ ರಾಜ್ಯವಾಗುವ ಸ್ಥಿತಿ ಗಾಢವಾಗಿ ಮನಸ್ಸನ್ನು ಕಲಕುತ್ತದೆ.
ಬಯಲು ಸೀಮೆಯ ಬದುಕನ್ನು ಶ್ರೀ ರಾವಬಹಾದ್ದೂರ ಅವರು ತಮ್ಮದೇ ದೃಷ್ಟಿಕೋನದಿಂದ
ಮನಮುಟ್ಟುವಂತೆ ಚಿತ್ರಿಸಿದ್ದಾರೆ.
Width
0 CMS
Height
0 CMS
Weight
350 GMS
Length
0 CMS
Publisher
Ankitha Pusthaka
Author
Ravabahaddhora
Number of Pages
332
Language
Kannada