Product Description
ತೆಲುಗು ಕಥೆಗಳ ಪಿತಾಮಹನೆಂದು ಗುರುತಿಸಲ್ಪಡುವ ಗುರಜಾಡ ಅಪ್ಪಾರಾವು ಸ್ತ್ರೀಪರ ಧ್ವನಿಯಾಗಿದ್ದವರು. ಮಾಸ್ತಿಯವರು ಕನ್ನಡದಲ್ಲಿ ಸಣ್ಣ ಕಥೆಗಳ ಜನಕರೆಂದು ಜನಮನದಲ್ಲಿ ಹೊಂದಿದ್ದ ಖ್ಯಾತಿಯೇ ತೆಲುಗಿನ ಕಥಾಸಾಹಿತ್ಯದಲ್ಲಿ ಗುರಜಾಡರಿಗೂ ಸಲ್ಲುತ್ತದೆ. ಅವರು ಮಾಸ್ತಿಯವರ ಸಮಕಾಲೀನರಷ್ಟೇ ಅಲ್ಲದೆ ಕನ್ನಡದಲ್ಲಿ ಮಾಸ್ತಿಯವರ ಮೊದಲ ಸಣ್ಣಕಥೆ ಪ್ರಕಟವಾದ ವರ್ಷವೇ ತೆಲುಗಿನಲ್ಲಿ ಗುರಜಾಡರ ಮೊದಲ ಕಥೆಯೂ ಪ್ರಕಟವಾಗಿದ್ದೊಂದು ವಿಶೇಷವೇ. ಉತ್ತಮ ಆದರ್ಶ, ಅಪ್ಪಟ ದೇಸೀಯ ಚಿಂತನೆ ಮೈಗೂಡಿಸಿಕೊಂಡ ಗುರಜಾಡರು ಬರೆದ ಕಥೆಗಳು ಸಂಖ್ಯೆಯಲ್ಲಿ ಕಡಿಮೆಯಾದರೂ ಮೌಲ್ಯವಂತಿಕೆಯಲ್ಲಿ ಎತ್ತರದ ಸ್ಥಾನ ಗಳಿಸಿವೆ. ಸ್ತ್ರೀ ಶಿಕ್ಷಣದ ಅವಶ್ಯಕತೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಒತ್ತುಕೊಟ್ಟು ಬರೆಯಲ್ಪಟ್ಟ ಅವರ ಕಥೆಗಳು ಅಂದಿನ ಕಾಲಕ್ಕಷ್ಟೇ ಅಲ್ಲದೆ ಇಂದಿಗೂ ಪ್ರಸ್ತುತವಾದ ವಿಚಾರಗಳೇ. ತೆಲುಗಿನಲ್ಲಿ ಅಲ್ಲಲ್ಲಿ ಚೆದುರಿಹೋಗಿದ್ದ ಕಥೆಗಳನ್ನು ಸಂಗ್ರಹಿಸಿ ಕನ್ನಡಕ್ಕೆ ತಂದವರು ಕನ್ನಡ ಸಾಹಿತ್ಯಕ್ಕೆ ಪರಿಚಿತರಾದ ಶ್ರೀ ಸ. ರಘುನಾಥ.