Quantity
Product Description
Videsha Kaala | Kannada | Vishweshwar Bhat
ನನ್ನ ವೃತ್ತಿ ಮತ್ತು ಪ್ರವೃತ್ತಿಗಳು ನೂರಕ್ಕೂ ಹೆಚ್ಚು ದೇಶಗಳಿಗೆ, ಮುನ್ನೂರ ಎಂಬತ್ತಕ್ಕೂ ಹೆಚ್ಚು ಸಲ ಹೋಗುವಂತೆ ಮಾಡಿದೆ. ಒಂದು ದೇಶಕ್ಕೆ ಒಂದೇ ಸಲ ಹೋಗಿದ್ದಿದ್ದರೆ. ಇಷ್ಟೊತ್ತಿಗೆ ನಾನು ಇಡೀ ಜಗತ್ತನ್ನು ಒಂದೂವರೆ ಸಲ ಸುತ್ತಿರುತ್ತಿದ್ದೆ. ಸಾಮಾನ್ಯವಾಗಿ ಯಾರೂ ಹೋಗದ ಸುಡಾನ್, ಬುರುಂಡಿ, ರವಾಂಡ, ಉಗಾಂಡದಂಥ ದೇಶಗಳಿಂದ ಹಿಡಿದು, ಉತ್ತರ ಧ್ರುವಕ್ಕೆ ಹತ್ತಿರವಿರುವ ಐಫ್ರೆಂಡ್ ತನಕ ಹೋಗಿ ಬಂದಿದ್ದೇನೆ. ನೋಡಿದ ಪ್ರತಿ ದೇಶವೂ ನನಗೆ ಅಪರೂಪವಾಗಿ, ವಿಶಿಷ್ಟವಾಗಿ ಕಂಡಿದೆ. ಇಸ್ರೇಲ್ ನನ್ನನ್ನು ಹತ್ತು ಸಲ ಬರಮಾಡಿಕೊಂಡಿದೆ. ಇದೊಂದೇ ಕಾರಣಕ್ಕೆ ಸೌದಿ ಅರೇಬಿಯಾ ನನಗೆ ಹದಿನಾರು ವರ್ಷ ವೀಸಾ ಕೊಟ್ಟಿರಲಿಲ್ಲ. ಒಮಾನಿನ ಭಯಾನಕ ಮರುಭೂಮಿಯಲ್ಲಿ ಸಾವಿರಾರು ಮೈಲು ಪ್ರಯಾಣ ಮಾಡಿ, ನಂತರ ಯೆಮನ್ ಗಡಿ ತನಕ ಗೊತ್ತಿಲ್ಲದೇ ಹೋಗಿದ್ದೆ. ವಾಪಸ್ ಬಂದಿದ್ದೇ ಪುಣ್ಯ. ಉಗಾಂಡ, ಕಾಂಗೋ ಮತ್ತು ರವಾಂಡದ ಗಡಿ ಸಂದಿಸುವ ವಿರುಂಗಾ ಅರಣ್ಯ ಪ್ರದೇಶದಲ್ಲಿ ಮೌಂಟನ್ ಗೊರಿಲ್ಲಾಗಳನ್ನು ಹಿಂಬಾಲಿಸಿ ಹೋಗಿದ್ದೆ. ಹತ್ತಾರು ಸಾವಿರ ಕಡಲಾಮೆಗಳು ಒಂದೆಡೆ ಮೊಟ್ಟೆ ಇಡುವುದನ್ನು ನೋಡಲೆಂದು ಮಸ್ಕತ್ ನ ಸುರ್ ಗೆ ಹೋಗಿದ್ದೆ. ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಜತೆ ಹದಿನಾಲ್ಕು ದಿನಗಳ ಕಾಲ ನಾಲ್ಕು ದೇಶಗಳನ್ನು ಸುತ್ತಿ ಬಂದಿದ್ದೇನೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಬಹುತೇಕ ರಾಷ್ಟ್ರಪತಿ, ಪ್ರಧಾನಿ, ವಿದೇಶಾಂಗ ಸಚಿವರ ಜತೆ ಇಪ್ಪತ್ತಕ್ಕೂ ಹೆಚ್ಚು ದೇಶಗಳಿಗೆ ಹೋಗಿದ್ದೇನೆ. ಇಂಥ ನಾಯಕರು ಭಾಗವಹಿಸುವ ಎಲ್ಲ ಅಂತಾರಾಷ್ಟ್ರೀಯ ಶೃಂಗ ಮತ್ತು ಸಮಾವೇಶಗಳನ್ನು ವರದಿ ಮಾಡಿದ್ದೇನೆ. ಎಷ್ಟೇ ದೇಶ ಸುತ್ತಿದರೂ ನೆರೆಯ ಪಾಕಿಸ್ತಾನಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಅಲ್ಲಿಗೂ ಎರಡು ಸಲ ಹೋಗಿದ್ದೆ. ಲಂಡನ್ ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಯುರೋಪಿನ ಬಹುತೇಕ ದೇಶಗಳನ್ನು ನೋಡುವ ಅವಕಾಶ ಒದಗಿ ಬಂದಿತ್ತು. ಲಕ್ಷಾಂತರ ಪ್ರಾಣಿಗಳು ಗುಳಿ (ಗ್ರೇಟ್ ಮೈಗ್ರೇಶನ್) ಹೋಗುವುದನ್ನು ನೋಡಲೆಂದೇ ಕೀನ್ಯಾದ ಮಸ್ಯೆ ಮರುಕ್ಕೆ ಹೋಗಿದ್ದೆ. ಉಷ್ಟ್ರಪಕ್ಷಿಗಳ ರೇಸ್ ನೋಡಲು దక్షిణ ఆవుకాద రీ టౌనో కరీదిత్తు బెంగళూరినింద సింగాపుర ఓerdos. ಹೊರಗೆ ಹೋಗದೇ, ಅಲ್ಲಿನ ಬಾಂಗಿ ಏರ್ ಪೋರ್ಟಿನಲ್ಲಿ ಮೂರು ದಿನ ಉಳಿದು ಬಂದಿದ್ದೆ. ಸೌದಿ ಅರೇಬಿಯಾದ ಎಂಡ್ ಆಫ್ ದಿ ವರ್ಲ್ಡ್' ಎಂಬ ತಾಣವನ್ನು ನೋಡಲು ಹೋಗಿ ದಾರಿ ತಪ್ಪಿಸಿಕೊಂಡು ಕಣ್ಮರೆಯಾಗುವುದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದೆ. ನ್ನೊದೇಶಿಯ, ಆಸ್ಟ್ರಿಯಾ ಮತ್ತು ಹಂಗೇರಿ ಈ ಮೂರೂ ದೇಶಗಳ ಗಡಿ ಸಂದಿಸುವೆಡೆ ಇಟ್ಟ ಒಂದೇ ಟೇಬಲ್ ನಲ್ಲಿ ಶಾಫಿ ಕುಡಿದು ಪುಳಕಗೊಂಡಿದ್ದೇನೆ. ಸೀರೆಲ್ಸ್, ಕೊಸುಮ್ಮೆ, ಕೊಟಕಿನಬಾಲು, ಇಲಿಜ್ಜಾದಂಥ ನಯನಮನೋಹರ ದ್ವೀಪ, ಕೊಪಕಬಾನ, ಪ್ರಯ ಡಿ ಮುರೊ, ಜನಾನದಂಥ ಬೀಡುಗಳಲ್ಲಿ ವಿಹರಿಸಿದ್ದೇನೆ. ಮೃತ ಸಮುದ್ರ (ಡೆಡ್ ಸೀ) ದಲ್ಲಿ ತೇಲುತ್ತಾ ಪತ್ರಿಕೆ, ಪುಸ್ತಕ ಓದಿದ್ದೇನೆ. ಬರ್ನಾರ್ಡ್ ಶಾ ಹೇಳಿದಂತೆ 1 dislike feeling at home when I am abroad! Loto ad ವಿದೇಶದಲ್ಲೇ ಕಳೆದಿದ್ದೆ! ಈ ಪುಸ್ತಕ ಆ ಎಲ್ಲ ಸ್ವಾರಸ್ಯಕರ ಕಥನಗಳನ್ನು ಒಳಗೊಂಡಿದೆ. ನಾನು ಇಲ್ಲಿ ಹೇಳಿದ್ದಕ್ಕಿಂತ ಪುಸ್ತಕದಲ್ಲಿ ಹೇಳಿರುವುದೇ ಹೆಚ್ಚು!
Author
Vishweshwar Bhat
Binding
Hard Bound
ISBN-13
9788194984689
Number of Pages
496
Publication Year
2025
Publisher
Vishwavani Pusthaka
Height
4 CMS
Length
22 CMS
Weight
500 GMS
Width
14 CMS
Language
Kannada