Quantity
Product Description
ಲವ್ ಇನ್ ದ ಟೈಮ್ ಆಫ್ ಕಾಲರಾ' ಒಂದು ಅಪರೂಪದ ಅತ್ಯದ್ಭುತ ಪ್ರೇಮ ಕಾದಂಬರಿ, ಪ್ರೇಮ ಎನ್ನುವುದು ಅದೊಂದು ಮೌನ ಸಂಭಾಷಣೆ, ಮಧುರಾನುಭೂತಿ. ಮನೋಲೋಕದ ಮಧುರ ಕಂಪನ, ಪದಗಳಲ್ಲಿ ಮೂಡದ ಆನಂದ. ವ್ಯಾಖ್ಯಾನಕ್ಕೆ ನಿಲುಕದ ಭಾವ... ಇಂತಹ ಪ್ರೇಮದ ಮೋಹಕ ಪರಿಮಳ ಹೊತ್ತ ಈ ಕಾದಂಬರಿ ಲವಲವಿಕೆಯಿಂದ ಜಿಗಿಯುತ್ತ, ಹಾರುತ್ತ, ಕನವರಿಸುತ್ತ, ಕಂಪಿಸುತ್ತ, ಕಣ್ಣಿನೊಳಕ್ಕೆ ಕನಸಿನಂತೆ ನುಸುಳುತ್ತ ಓದುಗನನ್ನು ಪ್ರೇಮ ಯಾನದಲ್ಲಿ ತೇಲಿ ಮುಳುಗಿಸಿ, ಪ್ರಣಯದಲ್ಲಿ ಮೀಯಿಸುವ ಕಥನ. ಯುವ ಪ್ರೇಮಿಗಳಿಬ್ಬರು ಪ್ರೇಮದ ಉಚ್ಚಾಯ ಸ್ಥಿತಿಗೆ ತಲುಪಿ, ಶಿಖರಪ್ರಾಯಕ್ಕೆ ತಲುಪುವ ಮುನ್ನ ವಿರಹಕ್ಕೆ ಜಾರಿಬಿದ್ದ ಮುಗ್ಧ ಹೃದಯಗಳ ಕಥಾ ಹಂದರ. ಇದೊಂದು ನಿಡುಗಾಲದ, ಮುದಿಗಾಲದ, ತುದಿಗಾಲದ ಸುದೀರ್ಘ ಪ್ರೇಮ ಕಥನ, ಕಾಲರಾ ಮಹಾಮಾರಿಗಿಂತಲೂ ಹೆಚ್ಚಾಗಿ ಪೀಡಿಸಿ, ಬಾಧಿಸಿದ ಪ್ರೇಮದಲ್ಲಿ ಬಿದ್ದು ಇಷ್ಟಪಟ್ಟ ಹುಡುಗಿಗಾಗಿ ಜೀವನ ಪರ್ಯಂತ ಕಾದು ಕುಳಿತ ಮುಗ್ಧಪ್ರೇಮಿ ಫ್ಲೋರೆಂಟಿನೊನ ಕತೆ. ತಿಳಿದು ತಿಳಿಯದ ವಯಸ್ಸಿನಲ್ಲಿ ಅವನನ್ನು ಪ್ರೀತಿಸಿ, ನಂತರ ತಿರಸ್ಕರಿಸಿ ಜೀವನದ ಕಡೆಯ ದಿನಗಳಲ್ಲಿ ತುಂಬ ತಡವಾಗಿ ಮತ್ತೆ ಸ್ವೀಕರಿಸಿದ ಫರ್ಮಿನಾಳ ಕತೆ, ಅಂತಸ್ತಿನ ಹಠಮಾರಿತನದಿಂದ ಫರ್ಮಿನಾಳನ್ನು ದಕ್ಕಿಸಿಕೊಂಡು ಐವತ್ತು ವರ್ಷಗಳ ಕಾಲ ಸುಂದರ ಬದುಕನ್ನು ಸಾಗಿಸಿ ಅನೂಹ್ಯದಂತೆ ಕಣ್ಣುಮುಚ್ಚಿದ ಡಾ. ಉರ್ಬಿನೊನ ಕತೆ. ಒಟ್ಟಾರೆಯಾಗಿ ಇದೊಂದು ತ್ರಿಕೋನ ಪ್ರೇಮ ಕಥನ. ಅಂತೆಯೆ ಫ್ಲೋರೆಂಟಿನೊನ ಶೃಂಗಾರದ ಪ್ರಣಯ ಕಥನವೂ ಕೂಡ.
Binding
Soft Bound
Author
Gabriel Garcia Marquez and Rajanna Thaggi T D
Number of Pages
200
Publisher
Srushti Publications
Publication Year
2025
Height
2 CMS
Length
22 CMS
Weight
300 GMS
Width
14 CMS
Language
Kannada