Quantity
Product Description
ಲೇಖಕ, ಪತ್ರಕರ್ತ ಮಾಧವ ಐತಾಳ್ ಅವರ ಅಂಕಣ ಬರಹಗಳ ಸಂಪಾದಿತ ಕೃತಿ 'ಬಹುವಚನ'. ಈ ಕೃತಿಯಲ್ಲಿ ಸಂಗ್ರಹಿಸಲಾದ ಈ ಲೇಖನಗಳು ಪ್ರಸ್ತುತ ಸಂದರ್ಭದ ವಿದ್ಯಮಾನಗಳ ಗಂಭೀರ ವಿಶ್ಲೇಷಣೆಯನ್ನು, ವಿಮರ್ಶೆಯನ್ನು ಒಳಗೊಂಡಿವೆ. ಅಭಿವೃದ್ಧಿಯ ಹೆಸರಿನಲ್ಲಿ ಹಿಮಾಲಯ ಪರ್ವತ ಶ್ರೇಣಿಗೆ ಉಂಟು ಮಾಡುತ್ತಿರುವ ಅಪಾಯಗಳು, ಉದ್ಯಮವಾಗುತ್ತಿರುವ ಆರೋಗ್ಯ ಕ್ಷೇತ್ರ, ದೇಶದ ಪಡಿತರ ವ್ಯವಸ್ಥೆಯ ಮೇಲಿನ ದಾಳಿ, ಆಡಳಿತ ವರ್ಗ ಉದ್ದೇಶಪೂರ್ವಕವಾಗಿ ನಾಶಮಾಡುತ್ತಿರುವ ಕಲ್ಯಾಣ ರಾಜ್ಯದ ಯೋಜನೆಗಳು, ಗ್ರಾಮಭಾರತದ ತಳಪಾಯದಲ್ಲಿ ಆಗುತ್ತಿರುವ ಅನಾರೋಗ್ಯಕರ ಪಲ್ಲಟಗಳು, ಹವಾಮಾನ ಬದಲಾವಣೆ, ಪಕ್ಷಿಗಳ ವಲಸೆ, ಉದ್ಯಮದ ಹೆಸರಿನಲ್ಲಿ ಅರಣ್ಯ ಕಾಯ್ದೆಯ ಉಲ್ಲಂಘನೆ ಮತ್ತು ತಿದ್ದುಪಡಿ, ಅರಣ್ಯ ನಾಶದ ಅಪಾಯಗಳು, ಕೃಷಿ ಕ್ಷೇತ್ರದ ಅವನತಿ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪರಿಸರ, ಅಪಾಯದಲ್ಲಿರುವ ಸಂವಿಧಾನ, ಹೀಗೆ ನಮ್ಮ ಕಾಲದ ಪ್ರಜಾ ಸಮೂಹ ಎದುರಿಸುತ್ತಿರುವ ಹಲವಾರು ಮೂಲಭೂತ ಸಮಸ್ಯೆಗಳನ್ನು ಇಲ್ಲಿನ ಲೇಖನಗಳು ಒಳಗೊಂಡಿವೆ. ಪ್ರಭುತ್ವಗಳು ಅನುಸರಿಸುತ್ತಿರುವ ಉದ್ಯಮ ಕೇಂದ್ರಿತ ನೀತಿ, ನಿಲುವುಗಳು ಹೇಗೆ ಪ್ರಜಾಸತ್ತೆಯನ್ನೂ ಪ್ರಜೆಗಳ ಹಿತಾಸಕ್ತಿಯನ್ನೂ ಕಡೆಗಣಿಸುತ್ತಿವೆ ಎಂಬುದನ್ನು ಮಾಧವ ಐತಾಳ್ ಅವರು ಅಧಿಕೃತ ದಾಖಲೆ ಮತ್ತು ಅಂಕಿ ಸಂಖ್ಯೆಗಳೊಂದಿಗೆ ಇಲ್ಲಿನ ಲೇಖನಗಳಲ್ಲಿ ದಾಖಲಿಸಿದ್ದಾರೆ. ನೆಲ, ಜಲ, ಅರಣ್ಯ, ಪರಿಸರ, ಸಂವಿಧಾನ, ಪ್ರಜಾಸತ್ತೆ, ಜನಾರೋಗ್ಯ, ಉದ್ಯೋಗ, ಕೃಷಿ, ಕೈಗಾರಿಕೆ, ಮೀಸಲಾತಿ, ತಂತ್ರಜ್ಞಾನ ಇಂಥ ಹಲವಾರು ಜನಕೇಂದ್ರಿತವಾಗಿರಬೇಕಾದ ಸಂಗತಿಗಳು, ವಿಷಯಗಳು ಇಂದಿನ ಪ್ರಭುತ್ವ ಅನುಸರಿಸುತ್ತಿರುವ ಕಾರ್ಪೊರೇಟ್ ಪರ ನೀತಿಗಳಿಂದಾಗಿ ಪ್ರಜಾಸತ್ತೆಯಲ್ಲಿ ಜನಗಳೇ ಮಾಯವಾಗಿದ್ದಾರೆ ಎಂಬುದಕ್ಕೆ ಇಲ್ಲಿನ ಲೇಖನಗಳು ಪುರಾವೆಗಳನ್ನು ಒದಗಿಸುತ್ತವೆ. ಮತೀಯವಾದ ಮತ್ತು ಮತೀಯ ರಾಜಕಾರಣ ಇಲ್ಲಿನ ಲೇಖನಗಳು ಒಳಗೊಂಡಿರುವ ಇನ್ನೊಂದು ಮಹತ್ವದ ವಿಷಯ. ಹಲವಾರು ಮಾಹಿತಿ, ಮುನ್ನೋಟ ಗಳನ್ನು ಒಳಗೊಂಡಿರುವ ಈ ಕೃತಿ ಜನಮನವನ್ನು ತಲುಪಲಿ. ಡಾ|| ಸಿದ್ದನಗೌಡ ಪಾಟೀಲ
Binding
Soft Bound
Author
Madhava Ithal
Number of Pages
232
Publisher
Nava Karnataka Publications Pvt Ltd
Publication Year
2025
ISBN-13
9788199385665
Length
22 CMS
Weight
200 GMS
Width
14 CMS
Height
3 CMS
Language
Kannada