Select Size
Quantity
Product Description
ಲೋಟಸ್ ಪಾಂಡ್’ಕಾದಂಬರಿ ಹೆಣ್ಣಿನ ಸ್ಥಿತಿಯನ್ನು ಶೋಧಿಸುವುದು ಬರೇ ಭಾವುಕತೆಯ ನೆಲೆಗಳಲ್ಲಿ ಅಲ್ಲ; ಲೇಖಕಿಯ ಗ್ರಹಿಕೆಯನ್ನು ಸ್ತ್ರೀವಾದೀ ವೈಚಾರಿಕತೆ ಸಹ ಪ್ರಭಾವಿಸಿರುವುದನ್ನು ಸ್ಪಷ್ಟವಾಗಿ ಇಲ್ಲಿ ಗುರುತಿಸಬಹುದಾಗಿದೆ.
ಈ ಕಾದಂಬರಿಯಲ್ಲಿ ಹೆಣ್ಣಿನ ದೇಹವೇ ಅವಳಿಗೆ ಅನಿವಾರ್ಯವಾಗಿ ಬಂದೊದಗಿರುವ ವಿಧಿ ಮತ್ತು ಸದಾ ಎಚ್ಚರದಲ್ಲಿ ರಕ್ಷಿಸಿಕೊಳ್ಳಬೇಕಾದ ಕ್ಷೇತ್ರ. ಬಿಡುಗಡೆ ಇಲ್ಲದ ಪಾಡು ಅದು.
ಹೆಣ್ಣಿನ ಈ ಅಸಹಾಯಕತೆ ಮಾತ್ರ ಇಲ್ಲಿನ ಸಿರಿವಂತರ ಕಾಲನಿ, ಗಾರ್ಡನ್ವ್ಯೂ ಮತ್ತು ಅದರ ಪಕ್ಕದಲ್ಲೇ ಇರುವ ಕೊಳೆಗೇರಿಗಳಿಗೆ ಇರುವ ಸಮಾನ ಗುಣ ಎಂಬುದು ಈ ಸ್ಥಿತಿಯ ವ್ಯಂಗ್ಯ! ಪ್ರತಿಷ್ಠಿತ ಮಹಿಳೆ ಕೃಪಾಳ ಮನಸ್ಸಿನ ಮೇಲೆ ನಡೆಯುವ ದಾಳಿ ಮತ್ತು ಕೊಂಪೆಯ ಹಸುಳೆ ಚಾಮಿಯ ದೇಹದ ಮೇಲೆ ಎರಗಿದ ಹಿಂಸೆ-ಎರಡರ ಮೂಲವೂ ಒಂದೇ-ಗಂಡಿನ ಆಕ್ರಮಣ!
ಗಾರ್ಡನ್ವ್ಯೂ ಕಾಲನಿಯಲ್ಲಿ ಎಗ್ಗಿಲ್ಲದೆ ಮೆರೆಯುವುದು ದುಡ್ಡು ಮಾತ್ರ-ಗಂಡಿನ ಆಕ್ರಮಣದ ಒಂದು ಹತ್ಯಾರ! ಇಲ್ಲಿನ ಮನೆಗಳಲ್ಲಿ ದುಡ್ಡುಕೊಳ್ಳಬಹುದಾದ ಎಲ್ಲವೂ ಇವೆ; ಆದರೂ ಅವು ಬಣಗುಡುತ್ತಿವೆ. ಅವುಗಳಲ್ಲಿ ವಾಸಿಸುತ್ತಿರುವವರು ದಯೆ ಮತ್ತು ಪ್ರೀತಿಗಳನ್ನು ಮರೆತಿದ್ದಾರೆ. ನೆಮ್ಮದಿ ಕೊಡದ ಸಂಪತ್ತು ಮತ್ತು ಪ್ರೀತಿ ಇಲ್ಲದ ಸಂಭೋಗ-ಗಾರ್ಡನ್ವ್ಯೂ ನಿವಾಸಿಗಳಿಗೆ ದಕ್ಕುವುದು ಇಷ್ಟೇ. ಈ ಪರಿಸರದಲ್ಲಿ ನೆರಳಿನಂತೆ ಓಡಾಡುತ್ತ ಇದ್ದೂ ಇಲ್ಲದಂತಿರುವ ಆಯೇಷಾಳ ಸಾಕ್ಷಿ ಪ್ರಜ್ಞೆಯಲ್ಲಿ ಇಲ್ಲಿನ ದುರಂತ ಬಿಚ್ಚಿಕೊಳ್ಳುತ್ತದೆ.
-ಜಿ. ರಾಜಶೇಖರ
Publication Year
2022
Publisher
Panchami Media Publications
Author
K Tara Bhat
ISBN-13
9788195489213
Binding
Soft Bound
Number of Pages
108
Width
15 CMS
Length
22 CMS
Height
1 CMS
Weight
100 GMS
Language
Kannada