Product Description
ಯಕ್ಷಿಣಿ ಭಾರೀ ರಹಸ್ಯ ವಿದ್ಯೇಯೇನಲ್ಲ. ನೀವೂ ಯಕ್ಷಿಣಿ ಮಾಡಬಹುದು. ನಿಮ್ಮ ಕುಟುಂಬದವರನ್ನು, ಗೆಳೆಯರನ್ನು ರಂಜಿಸಿ ಅವರಿಂದ ಶಹಭಾಸ್ಗಿರಿ ಪಡೆಯಬಹುದು. ನಿಮಗೆ ಬೇಕಾದ್ದು ಇದರಲ್ಲಿ ಶ್ರದ್ಧೆ, ಸ್ವಲ್ಪ ಅಭ್ಯಾಸ. ನೋಟಿನ ಸೃಷ್ಟಿ, ಗಣಿತದ ಜಾದೂ, ಕಲ್ಲಿನಿಂದ ನೀರು, ಆಧಾರವಿಲ್ಲದ ಮಂತ್ರದಂಡ, ಸೇಬಾಗುವ ಕಿತ್ತಳೆ, ಚಾಕಲೇಟ್ ಜಾದೂ, ಇಂಡಿಯನ್ ರೋಪ್ಟ್ರಿಕ್, ಇಂಡಿಯನ್ ರೋಪ್ಟ್ರಿಕ್, ಹೌಡಿನಿಯ ಗುಟ್ಟು ಇತ್ಯಾದಿ ಬೆರಗು ಹುಟ್ಟಿಸುವಂಥ 81 ಯಕ್ಷಿಣಿ ತಂತ್ರಗಳನ್ನು ವಿವರಿಸುವ ಸಚಿತ್ರ ಪುಸ್ತಕ.
ವೃತ್ತಿಯಿಂದ ಜಾದೂಗಾರ, ಧ್ವನಿಗಾರುಡಿಗ, ನೆರಳು ಚಿತ್ರಗಳ ಪ್ರದರ್ಶಕ, ಛಾಯಾಚಿತ್ರಗಾರ, ನಟ ಉದಯ್ ಜಾದೂಗಾರ್ ಈ ಕೃತಿಯಲ್ಲಿ, ಯವುದೇ ಪೂರ್ವ ನೈಪುಣ್ಯ, ತರಭೇತಿ ಅಥವಾ ವಿಶೇಷ ಸರಂಜಾಮುಗಳಿಲ್ಲದೆ ಯಕ್ಷಿಣಿ ಚಮತ್ಕಾರ ಮಾಡುವುದು ಹೇಗೆ ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ.