Quantity
Product Description
ಪಾಲಕತ್ವ ಒಂದು ಅಪರೂಪದ ಅವಕಾಶ, ಈ ಅವಕಾಶವು ಪ್ರಾರಂಭದ ಹಂತದಲ್ಲಿ ಬಹಳ ಉತ್ಸಾಹದಲ್ಲಿದ್ದು ಚೈತನ್ಯದಾಯಕವಾಗಿರುತ್ತದೆ. ಕಾಲ ಗತಿಸಿದ ಹಾಗೆ, ಜವಾಬ್ದಾರಿಗಳ ಸರಮಾಲೆ ಕೊರಳಿಗೆ ಬಿದ್ದಾಗ, ನಾವು ಪಾಲಕರಾಗುವುದಕ್ಕೆ ಕಾರಣಕರ್ತರಾದವರು ಗಮನಾರ್ಹವಾಗಿ ಬೆಳೆಯುತ್ತಿರುತ್ತಾರೆ. ಅವರ ಬೇಡಿಕೆಗಳು, ಅವರ ಆಸಕ್ತಿಗಳು, ಬೇರೆ ಬೇರೆ ಆಯಾಮಗಳನ್ನು ತೆಗೆದುಕೊಂಡಾಗ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಬೇಡಿಕೆಗಳು ಮೊಳಕೆ ಒಡೆದು ಅವರ ಬೆಳವಣಿಗೆಗೆ ಪ್ರತಿಸ್ಪರ್ಧಿಯಾಗಿ ಬೆಳೆಯಲು ಪ್ರಾರಂಭವಾಗುತ್ತವೆ. ಮೊದಮೊದಲಿಗೆ ಸಮರ್ಥರಾದವರು ದುರ್ಬಲರ ಮೇಲೆ ಹಕ್ಕನ್ನು ಚಲಾಯಿಸುವಂತೆ, ತಾತ್ಕಾಲಿಕ ಗೆಲುವು ಪಾಲಕರದೇ ಆದರೂ ಸೋತವರು ಅವರೇ ಆಗಿರುತ್ತಾರೆ. ಈ ಸತತ ಸೋಲು ನಿರಾಸಕ್ತಿಗೆ ಕಾರಣವಾಗುತ್ತದೆ. ಹೀಗೆ ಮುಂದುವರಿದಂತೆ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸಿಗದೇ ಸವಾಲುಗಳು ಎದೆ ಒಡ್ಡಿ ನಿಂತಾಗ ದಾರಿ ಕಾಣದೇ ಇದ್ದಾಗ “The Art of Parenting: ಪಾಲಕತ್ವದ ತತ್ವ” ಈ ಪುಸ್ತಕ ಪಾಲಕರಿಗೆ ಮಾರ್ಗದರ್ಶಿಯಾಗಿ ದಾರಿ ದೀಪವಾಗಲಿದೆ. ಈ ಪುಸ್ತಕದಲ್ಲಿ ಹಂಚಿಕೊಳ್ಳಲಾದ ವಿಚಾರಗಳು ಕೇವಲ ನೀತಿ ಪಾಠ ಅಲ್ಲದೇ ಪ್ರಾಯೋಗಿಕ ಟಿಪ್ಪಣಿಗಳು ಆಗಿದ್ದು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಇವು ನಮ್ಮ ಹುಡುಕಾಟಕ್ಕೆ ಪೂರ್ಣವಿರಾಮ ಆಗಬಹುದು.
Author
Gururaj Patil
Binding
Soft Bound
Number of Pages
124
Publication Year
2025
Publisher
Sawanna Enterprises
ISBN-13
9788198837783
Height
2 CMS
Weight
200 GMS
Width
14 CMS
Language
Kannada