Quantity
Product Description
ಕನ್ನಡದ ಅಪರೂಪದ ವಿಮರ್ಶಕರಲ್ಲಿ ಕೇಶವಶರ್ಮ ಅವರು ಕೂಡ ಒಬ್ಬರು. ಸಾಂಸ್ಕೃತಿಕ ರಾಜಕಾರಣದಲ್ಲಿ ಭಾಗಿಯಾಗದೆ ತಮ್ಮ ಪಾಡಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಬರೆಯುತ್ತಾ ಬಂದವರು. ಸಾಹಿತ್ಯ ವಿಮರ್ಶೆಯಲ್ಲಿ ತಮ್ಮದೇ ಹೆಜ್ಜೆ ಗುರುತನ್ನು ಮೂಡಿಸಿಕೊಂಡವರು ಕೂಡ ಹೌದು. ಅವರ ಕಠಿಣವಾದ ಪರಿಶ್ರಮ, ಓದಿನ ಬಗೆಗಿನ ಶ್ರದ್ಧೆ, ಕೊಂಕು ಮಾತುಗಳ ಬಗೆಗಿನ ನಿರ್ಲಿಪ್ತಯೇ ಅವರನ್ನು ರೂಪಿಸಿದೆ. ಬಹುಶಃ ಹೊಸ ತಲೆಮಾರಿನವರು ಮತ್ತೆ ಪಂಪನನ್ನು ಬೇರೆ ದೃಷ್ಟಿಕೋನದಿಂದ ಓದಬೇಕು ಎಂಬ ಹಂಬಲದಿಂದಲೇ ಈ ಕೃತಿಯನ್ನು ರಚಿಸಿದ್ದಾರೆ. ಅನೇಕ ಹಿರಿಯ ವಿದ್ವಾಂಸರು ಪಂಪಭಾರತದ ಬಗ್ಗೆ ಬರೆದಿದ್ದಾರೆ. ಆದರೆ ಇನ್ನೂ ಪಂಪನ ಕುರಿತು ಬರೆಯುವುದು ಬೇಕಾದಷ್ಟು ಇದೆ ಎಂದು ಈ ಕೃತಿಯು ಸೂಚಿಸುತ್ತದೆ. ಹೊಸ ದೃಷ್ಟಿಕೋನದಿಂದ ಪಂಪನನ್ನು ಹೇಗೆ ಓದಬಹುದು ಎಂದು ಈ ಕೃತಿಯು ಓದುಗರ ಅವಗಾಹನೆಗೆ ತರುತ್ತದೆ. ತುಂಬಾ ಸಂಯಮ ಮತ್ತು ಅಪಾರವಾದ ತಾಳ್ಮೆಯಿಂದ ಬರೆದ ಈ ಕೃತಿಯು ಪಂಪ ಭಾರತದ ಕುರಿತು ಅಪಾರ ಒಳನೋಟವನ್ನು ಕೊಡುತ್ತದೆ. ನಮ್ಮ ದೇಸಿ ಪ್ರಕಾಶನದಲ್ಲಿ ಅವರ ಈ ಕೃತಿಯು ಪ್ರಕಟವಾಗುತ್ತಿದೆ ಎಂಬ ಹೆಮ್ಮೆ ನಮ್ಮದು. ನಮ್ಮ ಪ್ರಕಾಶನ ಜೊತೆಗೆ ಅವರ ಬರಹದ ನಂಟು ಇಂದು ನೆನ್ನೆಯದಲ್ಲ ದಶಕಗಳೇ ಕಳೆದವು. ಈಗಲೂ ಅದೇ ನಂಟು, ಅದೇ ಸ್ನೇಹ ಮತ್ತು ವಿಶ್ವಾಸ ಅದು ಮುಂದುವರಿಯುತ್ತದೆ. ಕನ್ನಡದ ಓದುಗರು ಈ ಕೃತಿಯನ್ನು ಪ್ರೀತಿಯಿಂದ ಕೈಗೆತ್ತಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಪ್ರಕಾಶಕರು
Binding
Soft Bound
Author
K Keshava Sharma
Number of Pages
150
Publisher
Srushti Publications
Publication Year
2025
Height
2 CMS
Length
22 CMS
Weight
200 GMS
Width
14 CMS
Language
Kannada