Quantity
Product Description
ಒಬ್ಬ ಪ್ರಖ್ಯಾತ ವಿಜ್ಞಾನಿ, ರಾಷ್ಟ್ರಪತಿಯ ಒಳಗೊಬ್ಬ ಕವಿ ಸದಾ ಜಾಗೃತವಾಗಿದ್ದ ಎನ್ನುವುದಕ್ಕೆ ಈ ಕವನ ಸಂಕಲನ ಸಾಕ್ಷಿ. ಕವಿ ಕಲಾಂ ಬಾಲ್ಯದ ತಾಯಿ ಮಡಿಲಿನ ಅನುಭವಗಳಿಂದ ದೇಶದ ರಾಷ್ಟ್ರಪತಿಯಾಗುವ ತನಕದ ತಮ್ಮ ಅನುಭವಗಳನ್ನು ಕಾವ್ಯದ ಮೂಲಕ ಕಟ್ಟಿ ಕೊಟ್ಟಿದ್ದಾರೆ. ವಿಜ್ಞಾನಿಯ ಹುಡುಕಾಟ, ಆಡಳಿತಗಾರನ ಆಶಯ ಎಲ್ಲವೂ ಪ್ರೀತಿ, ಪ್ರೇಮ, ಸೌಹಾರ್ದತೆ, ಅಭಿವೃದ್ಧಿ ಮಾನವಕುಲದ ಒಳಿತನ್ನೇ ಒಳಗೊಂಡಿದ್ದವು ಎನ್ನುವುದನ್ನು ಇಲ್ಲಿನ ಕವನಗಳು ಸಾಬೀತುಪಡಿಸುತ್ತವೆ. ಈ ಸಂಕಲನದಲ್ಲಿ ಡಾ. ಅಬ್ದುಲ್ ಕಲಾಂ ಗ್ಯಾಲಾಕ್ಸಿಯಲ್ಲಿ ಪ್ರೀತಿಯ ಕುರಿತು ಮಾತನಾಡುತ್ತಾರೆ. "ಮನೆಯಲ್ಲಿ ಸಾಮರಸ್ಯವಿದ್ದಾಗ ರಾಷ್ಟ್ರದಲ್ಲಿ ಸಭ್ಯತೆ ಇರುತ್ತದೆ. ರಾಷ್ಟ್ರದಲ್ಲಿ ಸಭ್ಯತೆ ಇದ್ದಾಗ ಜಗತ್ತಿನಲ್ಲಿ ಶಾಂತಿ ಇರುತ್ತದೆ" ಎನ್ನುತ್ತಾರೆ. ಅವರ ಮನದಲ್ಲಿನ ನಿಸರ್ಗ ಪ್ರೇಮ, ಮಾನವ ಮತ್ತು ಜೀವ ಜಗತ್ತಿನ ಮೇಲಿರುವ ಪ್ರೀತಿ ಪ್ರತಿ ಕವನದಲ್ಲೂ ವ್ಯಕ್ತವಾಗುತ್ತದೆ. ಮಂಗಳ ಗ್ರಹದ ಮನುಷ್ಯನೊಂದಿಗೂ ಕಲಾಂ ಭೂಮಿಯ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ. 'ಪ್ರಕೃತಿ ಮತ್ತು ಮನುಷ್ಯ ಬೇರ್ಪಟ್ಟಿದ್ದಾರೆ' ಎಂಬ ಆತಂಕ ಸದಾ ಕಲಾಂ ಅವರನ್ನು ಕಾಡುತ್ತದೆ ಮತ್ತು ಒಂದುಗೂಡಿಸುವ ತಹತಹಿಕೆ ಈ ಕವನಗಳಲ್ಲಿ ಕಾಣಿಸುತ್ತದೆ. ಡಾ. ಸಿದ್ದನಗೌಡ ಪಾಟೀಲ
Author
A P J Abdul Kalam and Shakira Khanum (Sabi)
Binding
Soft Bound
Number of Pages
95
Publication Year
2025
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada