Select Size
Quantity
Product Description
‘ಜೀವಸ್ವರ’ ಇದು ಕಲಾ ಭಾಗ್ವತ್ ಅವರ ಇತ್ತೀಚಿನ ಕೃತಿ. ಈ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಪ್ರಕಟಿಸಿದೆ. ಸಾಂಪ್ರತ ಕನ್ನಡದ ಉತ್ಕೃಷ್ಟ ಲೇಖಕ, ಸಾಹಿತಿಗಳಲ್ಲಿ ಜಯಂತ ಕಾಯ್ಕಿಣಿ ಅವರದು ಎದ್ದು ಕಾಣುವ ಹೆಸರು. ಅವರದು ವರ್ಣರಂಜಿತ ವ್ಯಕ್ತಿತ್ವ. ಸಾಹಿತ್ಯ, ಸಿನಿಮಾ, ರಂಗಭೂಮಿ, ಚಿತ್ರಕಲೆ, ಪತ್ರಿಕೋದ್ಯಮ, ಸಂಗೀತ, ಭಾಷಾಂತರ ಹೀಗೆ ಅವರ ಸೃಜನಶೀಲತೆ ನಾನಾ ತೆರದಲ್ಲಿ ಪ್ರಕಟವಾಗಿದೆ. ಜಯಂತರ ಪ್ರತಿಭೆಯ ಕಾರ್ಯ ಬೆರಗು ಹುಟ್ಟಿಸುತ್ತದೆ. ಆಧುನಿಕ ಕನ್ನಡ ವಾಙ್ಮಯಕ್ಕೆ ತಮ್ಮ ಸ್ವೋಪಜ್ಞತೆಯಿಂದ ನೂತನ ಆಯಾಮ ನೀಡಿದ ಕೀರ್ತಿಗೂ ಅವರು ಭಾಜನರಾಗಿದ್ದಾರೆ. ಅವರು ಸ್ಫೂರ್ತಿಯ ಚಿಲುಮೆ. ಅವರಿದ್ದಲ್ಲಿ ಉಮೇದು, ಉತ್ಸಾಹ, ನಗೆಯಲೆ ಖಂಡಿತ. ಕನ್ನಡದ ಕೀರ್ತಿಯನ್ನು ಬಾನೆತ್ತರಕ್ಕೇರಿಸಿದ ಜಯಂತರ ಬರವಣಿಗೆ ಸಹೃದಯರಿಗೆ ಬಲು ಆಪ್ಯಾಯಮಾನ. ಕನ್ನಡ ಗದ್ಯ ಸಾಹಿತ್ಯಕ್ಕೆ ಜಯಂತ ಕಾಯ್ಕಿಣಿ ಅವರಿಂದ ನೂತನ ಆಯಾಮ ಸಿಕ್ಕಿದೆ ಎಂಬುದು ಅಭಿಮಾನದ ಸಂಗತಿ. ಜಯಂತರ ಗದ್ಯ ಬರವಣಿಗೆ ಸದ್ದಿಲ್ಲದೆ ಸದಭಿರುಚಿಯ ನಿರ್ಮಾಣದ ಕೆಲಸವನ್ನು ಮಾಡುತ್ತಾ ಸಾಗುತ್ತದೆ. ಅವರದು ಮೂಲಭೂತವಾಗಿ ಮಾನವೀಯ ಕಾಳಜಿ, ಅವರ ಪ್ರಬಂಧಗಳಲ್ಲಿ ಪುಟಿಯುವ ಜೀವನ ಪ್ರೀತಿ, ಅದಮ್ಯ ಆಶಾವಾದ, ಶಬ್ದ ಚಿತ್ರಗಳ ಬೆರಗು, ಕಾವ್ಯಾತ್ಮಕ ತೀವ್ರತೆ, ಬದುಕಿನ ಕುರಿತ ಆರೋಗ್ಯಕರ ಉತ್ಸಾಹಿ ದೃಷ್ಟಿಕೋನ ಹೀಗೆ ಜಯಂತರ ಪ್ರಬಂಧ ಪ್ರಪಂಚದ ಅತಿಶಯತೆ, ಅನನ್ಯತೆಗಳನ್ನು ಬೆಳಕಿಗೆ ಹಿಡಿಯುವಲ್ಲಿ ಕಲಾ ಭಾಗ್ವತ್ ಅವರು ಇಲ್ಲಿ ಯಶಸ್ವಿಯಾಗಿದ್ದಾರೆ.
Binding
Soft Bound
Author
Kala Bhagwat
ISBN-13
9788190587457
Number of Pages
214
Publisher
Kannada Department, Mumbai University
Publication Year
2021
Height
2 CMS
Length
22 CMS
Weight
300 GMS
Width
14 CMS
Language
Kannada