Select Size
Quantity
Product Description
ಪುಸ್ತಕದ ಬಗ್ಗೆ : ಫಾರೆಸ್ಟರ್ ಪೊನ್ನಪ್ಪ (ಕಾದಂಬರಿ) ಕೊಡಗಿನ ಆಂತರ್ಯದಲ್ಲಿ ಹುದುಗಿದ್ದ ಅರಣ್ಯಾಧಿಕಾರಿಯೊಬ್ಬರ ಜೀವನಗಾಥೆ. ಮಲೆನಾಡಿನ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಹೆಣ್ಣು, ಹಣದ ಹಿಂದೆ ಹೋಗಿ ಕೊನೆಗೆ ಭಿಕ್ಷೆ ಬೇಡುವಂತಾದವನ ದುರಂತ! ದಾರಿ ತಪ್ಪಿದ ಮಗನಿಗಾಗಿ ಚಡಪಡಿಸುವ ಹಿರಿಜೀವಗಳ ದಾರುಣ ಪರಿಸ್ಥಿತಿ! ಗುಡ್ಡಗಾಡಿನ ವಾಸ್ತವತೆ ಮತ್ತು ಅಂತರಾತ್ಮ. ಮರಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಅರಣ್ಯಾಧಿಕಾರಿಯೊಬ್ಬರ ರೋಚಕ ಕಥೆ (ಜೀವನಚರಿತ್ರೆ). ಲೇಖಕರ ಬಗ್ಗೆ: ನೌಶಾದ್ ಜನ್ನತ್ತ್ ಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ, ನೌಶಾದ್ ಜನ್ನತ್ತ್ರ ಹುಟ್ಟೂರು. ಸುಂಟಿಕೊಪ್ಪ ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು ಸದ್ಯ ಕುಶಾಲನಗರದಲ್ಲಿ ಕುಟುಂಬದೊAದಿಗೆ ವಾಸವಾಗಿದ್ದಾರೆ. ಜೀವನೋಪಾಯಕ್ಕಾಗಿ ಕೊಡಗಿನ ಗಡಿಯಂಚಿನಲ್ಲಿ ಪಿಠೋಪಕರಣಗಳ ಉದ್ಯಮವನ್ನು ನಡೆಸುತ್ತಿರುವ ನೌಶಾದ್ರವರು, “ನಮ್ಮ ಕೊಡಗು ತಂಡ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸಂತ್ರಸ್ತರು ಮತ್ತು ಆದಿವಾಸಿಗಳ ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡುವುದರ ಜೊತೆಗೆ ಸರಕಾರಿ ಶಾಲೆ ಉಳಿಸಿ ಅಭಿಯಾನವನ್ನು ಕೂಡ ಕೊಡಗಿನಲ್ಲಿ ಪರಿಣಾಮಕಾರಿಯಾಗಿ ಮಾಡುತ್ತಾ ಬಂದಿದ್ದಾರೆ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಮೇಲೆ ಅಪಾರ ಒಲವಿದ್ದ ನೌಶಾದ್ ಜನ್ನತ್ತ್ರ ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ೨೦೨೦ರಲ್ಲಿ “ಕಡಮ್ಮಕಲ್ಲು ಎಸ್ಟೇಟ್”
Weight
300 GMS
Length
22 CMS
Width
14 CMS
Height
3 CMS
Author
Nowshad Jannath
Publisher
Veeraloka Books Pvt Ltd
Publication Year
2022
Number of Pages
260
ISBN-13
9789394942318
Binding
Soft Bound
Language
Kannada