Product Description
ಇಂದು ಇಸ್ಲಾಂ ಧರ್ಮ ಅದರ ಸ್ಥಾಪಕರ ಧ್ಯೇಯೋದ್ದೇಶಗಳನ್ನೆಲ್ಲ ಗಾಳಿಗೆ ತೂರಿ ತನ್ನದೇ ಆದ ಸಂಕುಚಿತ ದಾರಿಗಳನ್ನು ಕಂಡುಕೊಂಡಿದೆ ಎಂಬ ಸಾಧಾರವಾದ ಆರೋಪಗಳನ್ನು ಇಲ್ಲಿನ ಲೇಖನಗಳಲ್ಲೆಲ್ಲ ವ್ಯಕ್ತಪಡಿಸಲಾಗಿದೆ. ಅದರಲ್ಲೂ ಇಸ್ಲಾಂನಲ್ಲಿ ಮಹಿಳೆಯರಿಗೆ ನೀಡಲಾದ ವೈಯಕ್ತಿಕ-ಆರ್ಥಿಕ ಸವಲತ್ತುಗಳನ್ನು ನಂತರದ ಮೂಲಭೂತವಾದಿ ಪುರುಷರು ತಮ್ಮನುಕೂಲಕ್ಕೆ ದುರುಪಯೋಗಪಡಿಸಿದ್ದಾರೆ. ಇದಕ್ಕೆಲ್ಲ ಮೌಲವಿ-ಮುಲ್ಲಾ-ಉಲೇಮಾ ಮುಂತಾದ ಧಾರ್ಮಿಕರ - ಮುಖಂಡರ ಮೌನ ಸಮ್ಮತಿ ಇರುವುದನ್ನೂ ಖಂಡಿಸಿ ಪ್ರಗತಿಪರ ಚಿಂತನೆಯತ್ತ ಮುಖಮಾಡಿ ವಿಮರ್ಶೆ ಮಾಡಿದ ಲೇಖನಗಳಿವು. ಇಸ್ಲಾಂ ಧರ್ಮದ ಬಗ್ಗೆ ಖಚಿತವಾದ ಅಭಿಪ್ರಾಯ ಮಂಡಿಸಬಲ್ಲ ಡಾ|| ಅಸ್ಗರ್ ಅಲಿ ಎಂಜಿನಿಯರ್ ಅವರ ವಿಚಾರಧಾರೆ ಇಲ್ಲಿ ವ್ಯಕ್ತವಾಗಿದೆ. ಮುಸ್ಲಿಂ ಕಾನೂನುಗಳು, ಬಹುಪತ್ನಿತ್ವ, ಸಾಮಾಜಿಕ ನ್ಯಾಯದ ತಾರತಮ್ಯ ಇವೆಲ್ಲ ಮುಸ್ಲಿಂ ಮಹಿಳೆಯರಿಗೆ ಕಗ್ಗಂಟಾಗಿದ್ದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತಿರುವ ತಿರುಚಲ್ಪಟ್ಟ ಕುರಾನ್ ಹೇಳಿಕೆಗಳ ಗೊಂದಲಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.