Select Size
Quantity
Product Description
`ಆ 86ನೇ ಹಳ್ಳಿ’ ಬಾಳಾಸಾಹೇಬ ಲೋಕಾಪುರ ಅವರ ಅನುವಾದಿತ ಕಾದಂಬರಿಯಾಗಿದೆ. ಈ ಕೃತಿಯು ಇಂಗ್ಲಿಷ್ ಮೂಲದಾಗಿದ್ದು, ಸೇನ ದೇಸಾಯಿ ಗೋಪಾಲ್ ಲೇಖಕರಾಗಿದ್ದಾರೆ. ಕೃತಿ ಕುರಿತು ಬೆನ್ನುಡಿಯಲ್ಲಿ ಲೇಖಕರು ಹೀಗೆಹೇಳಿದ್ದಾರೆ: ‘ಆ 86ನೇ ಹಳ್ಳಿ’ ಕೃತಿಯನ್ನು ಪಥನಮುಖಿ ಕಾದಂಬರಿ ಎಂದು ಕರೆಯಬಹುದು. ಊರು ಮುಳುಗುತ್ತಿದೆ. ಜನ ದಿಕ್ಕೇಡಿಗಳಾಗುತ್ತಿದ್ದಾರೆ. ಅವರು ಕಟ್ಟಿಕೊಂಡ ಭೌತಿಕ ಬದುಕು ಪತನಗೊಳ್ಳುತ್ತಿದೆ. ಮನೆ ಮಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೋರಾಟದಲ್ಲಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಹಾಪೂರದಲ್ಲಿ ಅಮಾಯಕರು ಹೊಳೆ ಪಾಲಾಗುತ್ತಿದ್ದಾರೆ. ಹಳ್ಳಿಯ ಹೆಮ್ಮೆಯಾದ ವಾಡೆಯಲ್ಲಿ ನೀರು ನುಗ್ಗಿ ಅದು ತನ್ನ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಇದೆಲ್ಲವೂ ಪತನವೇ. ಅವರ ಗೋಪುರ ಮಾದರಿ ಸಾಮಾಜಿಕ ಸ್ಥರ ಬಿದ್ದು ಹೋಗುತ್ತಿದೆ. ಇಲ್ಲಿ ರಾಜ ನಾಯಕ ಎನ್ನುವ ದೊಡ್ಡ ಮನೆತನದ ಸಭ್ಯನ ಒಂದು ಸಣ್ಣ ಪ್ರಮಾದದಿಂದ ಉಂಟಾಗುವ ಜಾರುವಿಕೆ ಅವನ ಸಾವಿನಿಂದ ಅಂತ್ಯವಾಗುತ್ತದೆ. ಇನ್ನೊಂದು ಬಗೆಯಲ್ಲಿ ಈ ಕಾದಂಬರಿಯು ಹೊಸ ಮೌಲ್ಯಗಳಿಂದ ಆಶಾವಾದವನ್ನು ಹುಟ್ಟಿಸುತ್ತದೆ. ದಯಾ ಎಂಬ ಧೀರ ಮಹಿಳೆ ಜಾತ್ಯತೀತ ಮನೋಭಾವದ ತಾಯಿ ತನ್ನ ಗಂಡನಿಂದ ಸೂಳೆಯ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಗುವನ್ನು ತನ್ನ ಮಗಳೆಂದು ಅಪ್ಪಿಕೊಳ್ಳುವ ತನ್ನ ಮಕ್ಕಳಾದ ರೋಹನ ಮತ್ತು ಜೈ ಅವರೊಂದಿಗೆ ಅವಳನ್ನು ಕೂಡಾ ಸರಿ ಸಮವಾಗಿ ಪ್ರೀತಿಸುವ ಮಹಾತಾಯಿಯ ಆದರ್ಶ ಓದುಗರ ಮನ ಗೆಲ್ಲುತ್ತದೆ. ಸಮರ ಚಂದರನಂತಹ ಸಾಧಾರಣ ಸರಕಾರಿ ನೌಕರ ತನ್ನ ಹೋರಾಟ ಮತ್ತು ಜನಮುಖಿ ಧೋರಣೆಯಿಂದ ಎಂಎಲ್ಎ ಆಗಿ ಆಯ್ಕೆಯಾಗುವದು ಕೂಡಾ ಆಶಾದಾಯಕವಾಗಿದೆ. ಇನ್ನೊಂದು ಬಗೆಯಲ್ಲಿ ಕಾದಂಬರಿಯ ಕೊನೆಯಲ್ಲಿ ಉಷಾಳಿಗೆ ಮಗುವಾಗುವದು ಬದುಕಿನ ಆಶಾವಾದವನ್ನು ಹೆಚ್ಚಿಸುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
Binding
Soft Bound
Author
Balasaheb Lokapur
Number of Pages
304
Publisher
BB Publication
Publication Year
2024
Length
20 CMS
Weight
600 GMS
Language
Kannada