Quantity
Product Description
ಮೊದಲ ಕಥಾ ಸಂಕಲನವನ್ನು ಪ್ರಕಟಿಸುವ ಲೇಖಕಿಯೊಬ್ಬರಿಂದ ಸಾಮಾನ್ಯ ಓದುಗನೊಬ್ಬ ಏನನ್ನು ಬಯಸಬಹುದು? ಮನಸ್ಸಿಗೆ ತಾಕುವ ಕಥಾವಸ್ತು, ಬಿಗಿಬಂಧ, ತೊಡಕಾಗದ ನಿರೂಪಣೆ, ಮನಸ್ಸನ್ನು ಆರ್ದ್ರಗೊಳಿಸಿ ಅರಳಿಸಬಲ್ಲ, ಅಥವ ಚಿಂತನೆಗೆ ಹಚ್ಚಬಲ್ಲ ಶೈಲಿ ಹಾಗೂ ಪರಿಣಾಮವೇನೆಂದು ಊಹಿಸಿದರೆ ಮಲ್ಲಮ್ಮ ಜೊಂಡಿ ಅವರ ಚೊಚ್ಚಲ ಕೃತಿಯಲ್ಲಿ ಈ ಎಲ್ಲವೂ ಇವೆ.
ನಮ್ಮ ಸಾಮಾಜಿಕ ಬದುಕಿನ ಮೂಲ ಬೇರಾದ ಹಳ್ಳಿಗಾಡಿನ ಅನುಭವದ ಕುರಿತು ಎಷ್ಟು ಬರೆದರೂ ಅಕ್ಷಯವೇ. ಮಲ್ಲಮ್ಮ ಅಂಥ ನೆಲದ ಕಸುವಿನ ಅನುಭವದಲ್ಲಿ ತಮ್ಮ ಭಾವಲೋಕವನ್ನು ಆಳಕ್ಕಿಳಿಸಿ ಪ್ರತಿಭೆಯನ್ನು ಪಣಕ್ಕೊಡ್ಡಿ ಫಸಲನ್ನು ತೆಗೆಯಲು ಪ್ರಯತ್ನಿಸುತ್ತಿರುವ ಲೇಖಕಿ. ಅದರಲ್ಲಿ ಅವರು ಅಪರೂಪದ ಯಶಸ್ಸು ಸಾಧಿಸಿರುವುದು ಅವರ ಧ್ಯಾನದ ಫಲ.
ಜೀವನದ ಸಣ್ಣಪುಟ್ಟ ಘಟನೆ, ಜಂಜಾಟ, ಸಂಬಂಧಗಳ ಜಟಿಲತೆ, ಅಂತಃಕರಣ ಸೂಸುವ ಘಳಿಗೆಗಳು, ಹೆಣ್ಣಿನ ತಾಕಲಾಟಗಳು ಈ ಕಥೆಗಳ ಉದ್ದಕ್ಕೂ ಹರಿವ ಜಲವಾಗಿದೆ. ಹೆಣ್ಣಿನ ಒಳತೋಟಿ ಬಹುಪಾಲು ಕಥೆಗಳನ್ನು ಆವರಿಸಿವೆ. ಮಲ್ಲಮ್ಮ ಅವರ ಕೆನೆಗಟ್ಟಿದ ಅನುಭವ, ಬಯಲು ಸೀಮೆಯ ನವುರು ಸೂಚಿಸುವ ಭಾಷೆ, ನುರಿತ ನಿರೂಪಣೆ, ಕಲ್ಪನೆಯಲ್ಲಿ ಸುಖಿಸದೆ ಜೀವದ ಕಟುತ್ವದವನ್ನು ತೆರೆದಿಡುವ ವಾಸ್ತವತೆ ಈ ಕಥೆಗಳನ್ನು ಪಕ್ವವಾಗಿಸಿವೆ. ಸೋಂಕಿಲ್ಲದ ಮೃಣ್ಮಯ ಗೊಂಬೆಗಳಂಥ ಮನುಷ್ಯರ ಪಡಿಪಾಟಲುಗಳನ್ನು ಹಾಡುವ ಈ ಸಂಕಲನದ ಓದು ಮನಸ್ಸಿಗೆ ಮುದ ನೀಡುತ್ತಲೇ ಚಿಂತನೆಗೂ ಹಚ್ಚಬಲ್ಲವು.
Binding
Soft Bound
Author
Mallamma Jondi
ISBN-13
9789334294590
Number of Pages
100
Publisher
Vaishnavi Prakashana
Publication Year
2025
Height
1 CMS
Length
22 CMS
Weight
100 GMS
Width
14 CMS
Language
Kannada