Select Size
Quantity
Product Description
28.9.2024 ರಂದು ಪುಸ್ತಕ ಬಿಡುಗಡೆ ಬಂಗಾಳದ ಚತುರೆಯೊಬ್ಬಳು ಮೈಸೂರಿನ ಅರಮನೆಯ ಆಶ್ರಯ ಪಡೆದ ಪರಿಣಾಮದಿಂದಾಗಿಯೇ ನಮ್ಮ ರಾಷ್ಟ್ರಗೀತೆ ಆ ರಾಗರೂಪ ಪಡೆದದ್ದು! ತಿರುವಾಂಕೂರಿನ ಆಡಳಿತ ನೆಲೆ ನೀಡದ ದಲಿತವೈದ್ಯನಿಗೆ ಮೈಸೂರು ಆಶ್ರಯ ಕೊಟ್ಟ ಪರಿಣಾಮವೇ ಸ್ವಾಮಿ ವಿವೇಕಾನಂದರು ಸಿಡುಬುರೋಗ ದಿಂದ ಬಿಡುಗಡೆ ಪಡೆದು ಚಿಕಾಗೋಗೆ ಹೋಗಲು ಸಾಧ್ಯವಾದದ್ದು! ಕೋಲಾರದ ಚಿನ್ನದಗಣಿಗೆ ವಿದ್ಯುತ್ ಸರಬರಾಜು ಮಾಡಿ ಮುಂದೆ ಬೆಂಗಳೂರು ಸೇರಿದಂತೆ ನಮ್ಮ ನೆಲವನ್ನು ಬೆಳಗಿಸಿದ್ದು ಮೈಸೂರಿನ ರಾಣಿಯ ಪ್ರೋತ್ಸಾಹದಲ್ಲಿ ಸ್ಥಾಪಿತಗೊಂಡ ಕಾವೇರಿ ವಿದ್ಯುತ್ ಸ್ಥಾವರ! ಆ ರಾಣಿಯ ಮುಂದಾಲೋಚನೆಯಿಂದಾಗಿಯೇ ಸಿಡುಬು, ಪ್ಲೇಗ್ ಮುಂತಾದುವಕ್ಕೆ ಲಸಿಕೆಗಳು ಮೈಸೂರು ಪ್ರಾಂತ್ಯದಲ್ಲಿ ತಯಾರಾದದ್ದು. ಮಾರಿಕಣಿವೆಯಲ್ಲಿ ಕೃಷಿನೀರಾವರಿ ಅಣೆಕಟ್ಟು ನಿರ್ಮಾಣಗೊಂಡದ್ದು, ಬೆಂಗಳೂರಿನಲ್ಲಿ ಮಲ್ಲೇಶ್ವರಂ, ಬಸವನಗುಡಿಗಳು ಪ್ರಾರಂಭವಾದದ್ದು: ಟಾಟಾ ಅವರ ಆಶಯದ ವಿಜ್ಞಾನ ಸಂಸ್ಥೆ ನೆಲೆಗೊಂಡದ್ದು... ಇಂತಹ ಅದೆಷ್ಟೋ ಅಪರೂಪದ ಅಮೂಲ್ಯವಾದ ಕೈಂಕರ್ಯಗಳನ್ನು ಕೊಡುಗೆಯಾಗಿಸಿದ, ಜನಮನದಲ್ಲಿ ಹೊಸಚಿಂತನೆಗಳ ಬೀಜ ಬಿತ್ತಿದ, ಮೈಸೂರು ಪ್ರಾಂತ್ಯದ ಬೆಳವಣಿಗೆಯ ರೂವಾರಿಯಾಗಿದ್ದ ಅಪರೂಪದ ರಾಣಿ ಕೆಂಪನಂಜಮ್ಮಣ್ಣಿ ಯವರ ಹೃದಯಸ್ಪರ್ತಿ ಜೀವನಗಾಥೆ ಈ ಕೃತಿ. *-ಡಾ| ಕೆ.ಎನ್. ಗಣೇಶಯ್ಯ
Binding
Soft Bound
Author
Gajanana Sharma
Number of Pages
416
Publisher
Ankitha Pusthaka
Publication Year
2024
Weight
400 GMS
Width
20 CMS
Height
2 CMS
Length
22 CMS
Language
Kannada