Select Size
Quantity
Product Description
‘ಮುಂದೆ ಬರುವುದು ಮಹಾನವಮಿ’ ಅಲಕ ತೀರ್ಥಹಳ್ಳಿಯವರ ಮೊದಲ ಕಾದಂಬರಿ. ಉತ್ತಮ ಕತೆಗಾರರೂ ಆದ ಶ್ರೀಯುತರ ಕಾದಂಬರಿಗೂ, ಕತೆಗಳಿಗೂ ಸಂಬಂಧವಿರುವುದೊಂದು ಅಪರೂಪದ ಸಂಗತಿ. ಮಲೆನಾಡಿನ ಪುಟ್ಟ ಗ್ರಾಮಗಳ ಬಾಳ್ವೆಯನ್ನು ನಿರ್ಲಿಪ್ತವಾಗಿ, ಆದರೆ ಕುತೂಹಲ ಹುಟ್ಟಿಸುವಂತೆ ಅನಾವರಣಗೊಳಿಸುವ ಕಸುಬು, ಇವರ ಕತೆಗಳಲ್ಲಿರುವಂತೆ, ಕಾದಂಬರಿಯಲ್ಲೂ ಕಾಣಿಸುತ್ತದೆ.
ಕಳ್ಳುಬಳ್ಳಿ ಮತ್ತು ನೆರೆಹೊರೆಯ ಸಂಬಂಧವನ್ನು ಹಿತಮಿತವಾಗಿ ನಿಭಾಯಿಸುವ ಮೂರು ತಲೆಮಾರುಗಳ ಕುಟುಂಬ ಕಥನ ಇಲ್ಲಿದೆ: ಇಲ್ಲಿಯ ಜನರು ಸಂಪ್ರದಾಯ ಮತ್ತು ಆಧುನಿಕತೆಯ ಹದವನ್ನು ಅರಿತು, ಹಳೆಯದನ್ನು ಉಲಿಸಿಕೊಳ್ಳುವ ಹೊಸದನ್ನು ಬಿಟ್ಟುಕೊಡದ ಮನಃಸ್ಥಿತಿಯವರು; ಈ ಕಾಲದ ಅನಿವಾರ್ಯ ಕರ್ಮವಾದ ವಲಸೆಯಿಂದಾಗಿ ನೆಲೆಯನ್ನು ಕಳೆದುಕೊಂಡರೂ ಮೂಲ ನೆಲದ ಒಲವನ್ನು
ಉಳಿಸಿಕೊಂಡವರು; ನೆಮ್ಮದಿಯ ನಾಳೆಗಳಿಗೆ ತಮ್ಮನ್ನು ತೆರೆದುಕೊಂಡವರು.
ಹೊಸ ತಲೆಮಾರಿನಲ್ಲಿರುವ ಗೊಂದಲ, ವಿಭ್ರಮವನ್ನು ಮತ್ತು ಹಳೆ ತಲೆಮಾರಿನಲ್ಲಿರುವ ಸ್ಪಷ್ಟ, ದೃಢ ಆಶಾವಾದವನ್ನೂ ಕಾದಂಬರಿಯ ‘ಪೀಠಿಕಾ ಪ್ರಕರಣ’ವು ಸಾಂಕೇತಿಕವಾಗಿ ಸೂಚಿಸುತ್ತದೆ.
Weight
200 GMS
Length
22 CMS
Width
14 CMS
Height
2 CMS
Author
Alaka Tirthahalli
Publisher
Nava Karnataka Publications Pvt Ltd
Number of Pages
192
Binding
Soft Bound
Publication Year
2021
Language
Kannada